ನಿಯಮಗಳು ಮತ್ತು ಷರತ್ತುಗಳು

www.syngenta.co.in ಸೈಟ್‌ಗೆ ಸ್ವಾಗತ. ಸಿಂಜೆಂಟಾ ಹಾಗೂ ಅದರ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಸಾಮಾನ್ಯ ಮಾಹಿತಿಯನ್ನು ಒದಗಿಸಲು ಈ ವೆಬ್‌ಸೈಟ್‌ ಅನ್ನು ವಿನ್ಯಾಸಗೊಳಿಸಲಾಗಿದೆ.  ಈ ನಿಯಮಗಳು ಮತ್ತು ಷರತ್ತುಗಳ ಪಾಲನೆ ಮಾಡುತ್ತೀರಿ ಎನ್ನುವುದಕ್ಕೆ ಒಳಪಟ್ಟು, ನೀವು ಈ ವೆಬ್‌ಸೈಟ್‌ ಅನ್ನು ಬಳಸಬಹುದು.

ಈ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ನಿಮ್ಮ ಸಮ್ಮತಿ

ಈ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲು ದಯವಿಟ್ಟು ಒಂದಿಷ್ಟು ಸಮಯ ತೆಗೆದುಕೊಳ್ಳಿ. ಈ ವೆಬ್‌ಸೈಟ್ ಪ್ರವೇಶಿಸುವ ಮತ್ತು ಬಳಸುವ ಮೂಲಕ ನೀವು ಈ ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸಲು ಮತ್ತು ಅವುಗಳಿಗೆ ಬದ್ಧರಾಗಿರಲು ನೀವು ಒಪ್ಪುತ್ತೀರಿ. ಈ ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸಲು ಮತ್ತು ಇವುಗಳಿಗೆ ಬದ್ಧರಾಗಿರಲು ಒಂದು ವೇಳೆ ನೀವು ಒಪ್ಪದಿದ್ದರೆ, ಈ ಸೈಟ್ ಅನ್ನು ನೀವು ಪ್ರವೇಶಿಸಲು, ಬಳಸಲು ಅಥವಾ ಯಾವುದೇ ಸಾಮಗ್ರಿಯನ್ನು ಡೌನ್‌ಲೋಡ್‌ ಮಾಡಲು ಸಾಧ್ಯವಾಗದಿರಬಹುದು.

ಈ ನಿಯಮಗಳು ಮತ್ತು ಷರತ್ತುಗಳು ಬದಲಾಗಬಹುದು

ಯಾವುದೇ ಸೂಚನೆ ನೀಡದೆ ಯಾವುದೇ ಸಮಯದಲ್ಲಾದರೂ ಈ  ನಿಯಮಗಳು ಮತ್ತು ಷರತ್ತುಗಳನ್ನು ನವೀಕರಿಸುವ ಅಥವಾ ಬದಲಾವಣೆ ಮಾಡುವ ಹಕ್ಕನ್ನು ಸಿಂಜೆಂಟಾ ಕಾಯ್ದಿರಿಸಿರುತ್ತದೆ. ಅಂಥ ಯಾವುದೇ ಬದಲಾವಣೆಯ ನಂತರ ನಿಮ್ಮಿಂದ ಈ ವೆಬ್‌ಸೈಟ್‌ನ ಬಳಕೆ ಅಂಥ ಬದಲಾದ ನಿಯಮಗಳು ಮತ್ತು ಷರತ್ತುಗಳ ಪಾಲನೆ ಮತ್ತು ಅವುಗಳಿಗೆ ಬದ್ಧತೆಯಾಗಿರುವುದಕ್ಕೆ ನಿಮ್ಮ ಸಮ್ಮತಿಯನ್ನು ರಚಿಸುತ್ತದೆ. ಈ ಕಾರಣಕ್ಕಾಗಿ, ನೀವು ಈ ವೆಬ್‌ಸೈಟ್ ಅನ್ನು ಪ್ರತಿ ಬಾರಿ ಬಳಸುವಾಗ ಈ  ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

ಕಾಪಿರೈಟ್ ನೋಟಿಸ್ ಮತ್ತು ಸೀಮಿತ ಪರವಾನಗಿ

ಉದಾಹರಣೆಗೆ, ಎಲ್ಲ ಬರಹ, ಫೊಟೋಗಳು, ಪ್ರಾತ್ಯಕ್ಷಿಕೆಗಳು, ಗ್ರಾಫಿಕ್‌ಗಳು, ಆಡಿಯೋ ಕ್ಲಿಪ್‌ಗಳು, ವೀಡಿಯೋ ಕ್ಲಿಪ್‌ಗಳು ಮತ್ತು ಆಡಿಯೋ-ವೀಡಿಯೋ ಕ್ಲಿಪ್‌ಗಳು ಸೇರಿದಂತೆ, ಈ ವೆಬ್‌ಸೈಟ್‌ನಲ್ಲಿ ನೀವು ನೋಡುವ ಮತ್ತು ಕೇಳುವ ಎಲ್ಲವೂ ( “ಕಂಟೆಂಟ್‌”) ಯುನೈಟೆಡ್‌ ಸ್ಟೇಟ್ಸ್ ಕಾನೂನು ಮತ್ತು ಅನ್ವಯವಾಗುವ ಅಂತಾರಾಷ್ಟ್ರೀಯ ಕಾಪಿರೈಟ್‌ ಕಾನೂನುಗಳು ಮತ್ತು ಒಡಂಬಡಿಕೆಗಳ ನಿಯಮಗಳ ಅಡಿ ಕಾಪಿರೈಟ್ ಮಾಡಲ್ಪಟ್ಟಿರುತ್ತದೆ. ಕಂಟೆಂಟ್‌ನಲ್ಲಿರುವ ಕಾಪಿರೈಟ್‌ಗಳನ್ನು ಸಿಂಜೆಂಟಾ ಕಾರ್ಪೊರೇಷನ್ ಅಥವಾ ಅದರ ಒಂದು ಸಹಸಂಸ್ಥೆ, ಅಥವಾ ತಮ್ಮ ಸಾಮಗ್ರಿಗಳನ್ನು ಸಿಂಜೆಂಟಾಗೆ ಪರವಾನಗಿ ನೀಡಿರುವ ಮೂರನೇ ಪಕ್ಷಗಳು ಹೊಂದಿರುತ್ತವೆ. ಈ ಸೈಟ್‌ನ ಸಂಪೂರ್ಣ ಕಂಟೆಂಟ್‌ ಅನ್ನು ಯುನೈಟೆಡ್‌ ಸ್ಟೇಟ್ಸ್‌ ಕಾನೂನು ಮತ್ತು ಅನ್ವಯವಾಗುವ ಅಂತಾರಾಷ್ಟ್ರೀಯ ಕಾಪಿರೈಟ್ ಕಾನೂನುಗಳು ಮತ್ತು ಒಡಂಬಡಿಕೆಗಳಡಿ ಸಮಗ್ರ ಕಾರ್ಯ ಎಂದು ಕಾಪಿರೈಟ್ ಮಾಡಲಾಗಿರುತ್ತದೆ, ಹಾಗೂ ಕಂಟೆಂಟ್‌ನ ಆಯ್ಕೆ, ಸಮನ್ವಯ, ಹೊಂದಾಣಿಕೆ ಮತ್ತು ಸುಧಾರಣೆಯ ಕಾಪಿರೈಟ್ ಅನ್ನು ಸಿಂಜೆಂಟಾ ಹೊಂದಿರುತ್ತದೆ.

ಈ ಕೆಳಗಿನವುಗಳಿಗೆ ಒಳಪಟ್ಟು ನೀವು ಈ ಸೈಟ್‌ ಕಂಟೆಂಟ್‌ನ ಆಯ್ದ ಭಾಗಗಳನ್ನು ಡೌನ್‌ಲೋಡ್‌, ದಾಸ್ತಾನು, ಮುದ್ರಣ ಅಥವಾ ನಕಲು ಮಾಡಬಹುದು:

• ಡೌನ್ಲೋಡ್ ಮಾಡಿದ ಕಂಟೆಂಟ್ ಅನ್ನು ಕೇವಲ ನಿಮ್ಮ ವೈಯಕ್ತಿಕ, ಕಮರ್ಷಿಯಲ್ ಅಲ್ಲದ ಬಳಕೆಗೆ ಅಥವಾ ಸಿಂಜೆಂಟಾ ಜೊತೆಗೆ ವ್ಯವಹಾರ ಡೀಲ್‌ಗಳನ್ನು ಮುಂದುವರಿಸುವುದಕ್ಕಾಗಿ ಮಾತ್ರ ಬಳಸಬೇಕು;
• ಇತರ ಯಾವುದೇ ಇಂಟರ್ನೆಟ್ ಸೈಟ್ನಲ್ಲಿ ನೀವು ಕಂಟೆಂಟ್‌ನ ಯಾವುದೇ ಭಾಗವನ್ನು ಪ್ರಕಟಿಸಬಾರದು ಅಥವಾ ಪೋಸ್ಟ್ ಮಾಡಬಾರದು;

ಇತರ ಯಾವುದೇ ಮಾಧ್ಯಮದಲ್ಲಿಅಥವಾ ಮಾಧ್ಯಮದ ಮೂಲಕ ನೀವು ಕಂಟೆಂಟ್ನ ಯಾವುದೇ ಭಾಗವನ್ನು ಪ್ರಕಟಿಸಬಾರದು ಅಥವಾ ಪ್ರಸಾರ ಮಾಡಬಾರದು;

ಯಾವುದೇ ರೀತಿಯಲ್ಲಿ ನೀವು ಕಂಟೆಂಟ್ ಅನ್ನು ತಿದ್ದುಪಡಿ ಮಾಡಬಾರದು ಅಥವಾ ಬದಲಾಯಿಸಬಾರದು ಅಥವಾ ಯಾವುದೇ ಕಾಪಿರೈಟ್ ಅಥವಾ ಟ್ರೇಡ್ಮಾರ್ಕ್ ನೊಟೀಸ್ಗಳು ಅಥವಾ ಗೌಪ್ಯತೆಯ ನೊಟೀಸ್ಗಳನ್ನು ಅಳಿಸಬಾರದು ಅಥವಾ ತಿದ್ದುಪಡಿ ಮಾಡಬಾರದು.
 
ಮೇಲೆ ಸ್ಪಷ್ಟವಾಗಿ ಹೇಳಿರುವುದನ್ನು ಹೊರತುಪಡಿಸಿ, ಸಿಂಜೆಂಟಾದಿಂದ ಮೊದಲು ಲಿಖಿತ ಅನುಮತಿ ಪಡೆಯದೆ ಈ ಸೈಟ್ನ ಸಂಪೂರ್ಣ ಕಂಟೆಂಟ್ ಅಥವಾ ಅದರ ಯಾವುದೇ ಭಾಗವನ್ನು ನೀವು ನಕಲು, ಡೌನ್ಲೋಡ್, ಮುದ್ರಣ, ಪ್ರಕಟಣೆ, ಪ್ರದರ್ಶನ, ಕಾರ್ಯಾಚರಣೆ, ವಿತರಣೆ, ಪ್ರಸಾರ, ವರ್ಗಾವಣೆ, ಅನುವಾದ, ತಿದ್ದುಪಡಿ, ಸೇರ್ಪಡೆ, ನವೀಕರಣ, ಒಂದೆಡೆ ಕಲೆಹಾಕುವಿಕೆ, ಸಂಕ್ಷಿಪ್ತಗೊಳಿಸುವಿಕೆ ಅಥವಾ ಇತರ ಯಾವುದೇ ರೀತಿಯಲ್ಲಿ ಮಾರ್ಪಡಿಸುವಿಕೆ ಅಥವಾ ಅಳವಡಿಸಿಕೊಳ್ಳುವಿಕೆ ಮಾಡುವಂತಿಲ್ಲ. 
 
ಮೇಲೆ ಸ್ಪಷ್ಟವಾಗಿ ಹೇಳಿರುವುದನ್ನು ಹೊರತುಪಡಿಸಿ, ನೀವು ಈ ಸೈಟ್‌ನಿಂದ ಕಂಟೆಂಟ್ ಡೌನ್ಲೋಡ್ ಮಾಡಿಕೊಂಡಾಗ ಡೌನ್ಲೋಡ್ ಮಾಡಿಕೊಂಡ ಕಂಟೆಂಟ್‌ನಲ್ಲಿ ಯಾವುದೇ ಹಕ್ಕು, ಮಾಲೀಕತ್ವ ಅಥವಾ ಹಿತಾಸಕ್ತಿಯನ್ನು ನಿಮಗೆ ವರ್ಗಾಯಿಸುವುದಿಲ್ಲ. ಮೇಲೆ ಸ್ಪಷ್ಟವಾಗಿ ನೀಡಲಾಗಿರುವ ಅನನ್ಯವಲ್ಲದ ಸೀಮಿತ ಪರವಾನಗಿಯನ್ನು ಹೊರತುಪಡಿಸಿ, ಈ ನಿಯಮಗಳು ಮತ್ತು ಷರತ್ತುಗಳಲ್ಲಿ ಅಥವಾ ಈ ವೆಬ್‌ಸೈಟ್‌ನಲ್ಲಿ ಇರುವ ಯಾವುದನ್ನೂ ಸೂಚ್ಯವಾಗಿ, ಸ್ವಕೃತ ಪ್ರತಿಬಂಧ ಅಥವಾ ಬೇರೆ ರೀತಿಯಲ್ಲಿ, ಅಥವಾ ಸಿಂಜೆಂಟಾ ಅಥವಾ ಯಾವುದೇ ಮೂರನೇ ಪಕ್ಷದ ಯಾವುದೇ ಕಾಪಿರೈಟ್, ಟ್ರೇಡ್‌ಮಾರ್ಕ್, ಪೇಟೆಂಟ್, ಅಥವಾ ಇತರ ಬೌದ್ಧಿಕ ಸೊತ್ತು ಕಾಯ್ದೆಯಡಿ ಪರವಾನಗಿ ಒದಗಿಸುವಂಥದ್ದು ಎಂದು ಪರಿಗಣಿಸಬಾರದು.

ಟ್ರೇಡ್‌ಮಾರ್ಕ್ ನೋಟಿಸ್

ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗಿರುವ ಎಲ್ಲ ಟ್ರೇಡ್ಮಾರ್ಕ್‌ಗಳು, ಸರ್ವೀಸ್ ಮಾರ್ಕ್‌ಗಳು ಮತ್ತು ಲೋಗೊಗಳು (“ಟ್ರೇಡ್ಮಾರ್ಕ್(ಗಳು)”) ನೋಂದಾಯಿಸಲ್ಪಟ್ಟಿವೆ ಮತ್ತು ಸಿಂಜೆಂಟಾ, ಅದರ ಒಂದು ಸಹಸಂಸ್ಥೆ, ಅಥವಾ ಮೂರನೇ ಪಕ್ಷದ ನೋಂದಾಯಿಸಲ್ಪಡದ ಟ್ರೇಡ್‌ಮಾರ್ಕ್‌ಗಳು ಅವರ ಟ್ರೇಡ್‌ಮಾರ್ಕ್‌ಗಳನ್ನು ಸಿಂಜೆಂಟಾ ಅಥವಾ ಅವರ ಒಂದು ಸಹಸಂಸ್ಥೆಗೆ ಪರವಾನಗಿಯಡಿ ನೀಡಿವೆ.

ಈ ನಿಯಮ ಮತ್ತು ಷರತ್ತುಗಳಡಿ ಸ್ಪಷ್ಟವಾಗಿ ಹೇಳಿರುವುದನ್ನು ಹೊರತುಪಡಿಸಿ, ಮುಂಚಿತವಾಗಿ ಸಿಂಜೆಂಟಾದಿಂದ ಲಿಖಿತ ಪರವಾನಗಿ ಪಡೆಯದೆ ನೀವು ಯಾವುದೇ ಟ್ರೇಡ್‌ಮಾರ್ಕ್‌ಗಳನ್ನು ಮರುಸೃಷ್ಟಿ, ಪ್ರದರ್ಶನ ಅಥವಾ ಇಲ್ಲದೇ ಹೋದಲ್ಲಿ ಬಳಸುವಂತಿಲ್ಲ.
 

ಕೋರದ ವಿಚಾರಗಳು

ಈ ವೆಬ್‌ಸೈಟ್‌ಗೆ ಸಂಬಂಧಿಸಿ ನಿಮ್ಮ ಟಿಪ್ಪಣಿಗಳು ಮತ್ತು ಅಭಿಪ್ರಾಯಗಳನ್ನು ಸಿಂಜೆಂಟಾ ಸ್ವಾಗತಿಸುತ್ತದೆ. ಈ ವೆಬ್‌ಸೈಟ್ ಮೂಲಕ ಸಿಂಜೆಂಟಾಗೆ ಸಲ್ಲಿಸಿದ ಯಾವುದೇ ಟಿಪ್ಪಣಿಗಳು, ಅಭಿಪ್ರಾಯಗಳು, ವಿಚಾರಗಳು, ಪ್ರಶ್ನೆಗಳು, ವಿನ್ಯಾಸಗಳು, ಡೇಟಾ ಅಥವಾ ಡೇಟಾದಂಥ ಎಲ್ಲ ಮಾಹಿತಿ ಮತ್ತು ಸಾಮಗ್ರಿಗಳನ್ನು, ಗೌಪ್ಯತೆಯಲ್ಲದ್ದು ಮತ್ತು ಸ್ವಾಮ್ಯರಹಿತವಾದ್ದು ಎಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಯಾವುದೇ ಗೌಪ್ಯ ಮಾಹಿತಿ ಅಥವಾ ಉತ್ಪನ್ನ ವಿಚಾರಗಳು, ಕಂಪ್ಯೂಟರ್‌ ಕೋಡ್, ಅಥವಾ ಮೂಲ ಕಲಾಕೃತಿಯಂಥ ಯಾವುದೇ ಮೂಲ ಸೃಜನಾತ್ಮಕ ಸಾಮಗ್ರಿಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದೆ, ನೀವು ನಮಗೆ ನಿಯೋಜಿಸಲು ಬಯಸದ ಯಾವುದೇ ಮಾಹಿತಿ ಅಥವಾ ಸಾಮಗ್ರಿಗಳನ್ನು ನಮಗೆ ಕಳುಹಿಸಬೇಡಿ ಎಂದು ನಾವು ಹೇಳುತ್ತೇವೆ.

ಈ ವೆಬ್‌ಸೈಟ್‌ ಮೂಲಕ ಸಿಂಜೆಂಟಾಗೆ ಪತ್ರವ್ಯವಹಾರ ಮತ್ತು/ಅಥವಾ ಸಾಮಗ್ರಿಗಳನ್ನು ಸಲ್ಲಿಸುವ ಮೂಲಕ, ನೀವು ಸಲ್ಲಿಸಿರುವ ಮಾಹಿತಿ ಮತ್ತು/ಅಥವಾ ಸಾಮಗ್ರಿಗಳಲ್ಲಿರುವ ಎಲ್ಲ ಕಾಪಿರೈಟ್‌ಗಳು ಮತ್ತು ಇತರ ಬೌದ್ಧಿಕ ಸೊತ್ತು ಹಕ್ಕುಗಳ ಎಲ್ಲ ವಿಶ್ವವ್ಯಾಪಿ ಹಕ್ಕುಗಳು, ಮಾಲೀಕತ್ವಗಳು ಮತ್ತು ಹಿತಾಸಕ್ತಿಗಳನ್ನು, ನಿಃಶುಲ್ಕವಾಗಿ ನೀವು ಸಿಂಜೆಂಟಾಗೆ ನಿಯೋಜಿಸುತ್ತೀರಿ. ಈ ವೆಬ್‌ಸೈಟ್‌ ಮೂಲಕ ನೀವು ಸಲ್ಲಿಸುವ ಯಾವುದೇ ಮಾಹಿತಿ ಮತ್ತು/ಅಥವಾ ಸಾಮಗ್ರಿಗಳನ್ನು ಮತ್ತು ಯಾವುದೇ ವಿಚಾರಗಳು, ಪರಿಕಲ್ಪನೆಗಳು, ಅಂತ ಯಾವುದೇ ಮಾಹಿತಿಯಲ್ಲಿರಬಹುದಾದ ಹೇಗೆ ಎಂದು ತಿಳಿದುಕೊಳ್ಳುವ ಅಥವಾ ತಂತ್ರಗಳು ಮತ್ತು/ಅಥವಾ ಸಾಮಗ್ರಿಗಳನ್ನು, ಅಭಿವೃದ್ಧಿಪಡಿಸುವುದು, ಉತ್ಪಾದಿಸುವುದು ಮತ್ತು ಅಂಥ ಮಾಹಿತಿ ಬಳಸಿಕೊಂಡು ಉತ್ಪನ್ನಗಳ ಅಥವಾ ಯಾವುದೇ ನಿರ್ಬಂಧಗಳಿಲ್ಲದೆ ಸಾಮಗ್ರಿಗಳ ಮಾರಾಟ ಮಾಡುವುದು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದೆ ಯಾವುದೇ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಮತ್ತು ಅದಕ್ಕಾಗಿ ನಿಮಗೆ ಯಾವುದೇ ರೀತಿಯಲ್ಲಿ ಪರಿಹಾರ ನೀಡದೆ ಇರಲು  ಸಿಂಜೆಂಟಾಗೆ ಅಧಿಕಾರ ಇರುತ್ತದೆ.  

ಅದಾಗ್ಯೂ, ಈ ವೆಬ್‌ಸೈಟ್ ಮೂಲಕ ನೀವು ಸಲ್ಲಿಸುವ ಯಾವುದೇ ಮಾಹಿತಿ ಅಥವಾ ಸಾಮಗ್ರಿಯನ್ನು ಅನ್ವಯವಾಗುವ ಕಾನೂನುಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಸಿಂಜೆಂಟಾ ಬಳಸುವುದಿಲ್ಲ.  ನಿರ್ದಿಷ್ಟವಾಗಿ, ಈ ಕೆಳಗಿನವುಗಳ ಹೊರತಾಗಿ ನಿಮ್ಮ ಹೆಸರನ್ನು ಸಿಂಜೆಂಟಾ ಬಿಡುಗಡೆ ಮಾಡುವುದಿಲ್ಲ ಅಥವಾ ನೀವು ಮಾಹಿತಿ ಅಥವಾ ಸಾಮಗ್ರಿಯನ್ನು ಸಲ್ಲಿಸಿದ್ದೀರಿ ಎನ್ನುವುದನ್ನು ಪ್ರಚುರಪಡಿಸುವುದಿಲ್ಲ: (ಎ) ನಿಮ್ಮ ಹೆಸರನ್ನು ಬಳಸಲು ನಾವು ನಿಮ್ಮ ಅನುಮತಿ ಪಡೆಯದೆ; ಅಥವಾ (ಬಿ) ಈ ಸೈಟ್‌ನ ನಿರ್ದಿಷ್ಟ ಭಾಗವಾಗಿ ನೀವು ಸಲ್ಲಿಸಿದ ಸಾಮಗ್ರಿಗಳು ಅಥವಾ ಇತರ ಮಾಹಿತಿಯನ್ನು ಪ್ರಕಟಿಸಲಾಗುತ್ತದೆ ಅಥವಾ ಇಲ್ಲದೇ ಹೋದಲ್ಲಿ ನಿಮ್ಮ ಹೆಸರಿನೊಂದಿಗೆ ಅದನ್ನು ಬಳಸಲಾಗುತ್ತದೆ ಎಂದು ನಾವು ನಿಮಗೆ ಮುಂಚಿತವಾಗಿ ತಿಳಿಸದೆ; ಅಥವಾ (ಸಿ) ಕಾನೂನಿನ ಅನುಸಾರ ನಾವು ಹಾಗೆ ಮಾಡುವ ಅಗತ್ಯವಿಲ್ಲದ ಹೊರತು.

ಮೂರನೇ ಪಕ್ಷದ ಮಾಹಿತಿ

ಮೂರನೇ ಪಕ್ಷದ ಸುದ್ದಿಗಳು ಮತ್ತು ಸ್ಟಾಕ್‌ ಕೊಟೇಷನ್‌ ಸೇವೆಗಳು ಸೇರಿದಂತೆ, ಈ ಸೈಟ್‌ನ ಮೂಲಕ ಲಭ್ಯವಿರುವ ಕೆಲವು ಮಾಹಿತಿ, ಲೇಖನಗಳು ಮತ್ತು ಇತರ ಸಾಮಗ್ರಿಗಳನ್ನು ಮೂರನೇ ಪಕ್ಷಗಳು ಸಿಂಜೆಂಟಾಗೆ ಒದಗಿಸುತ್ತವೆ. ನಮ್ಮ ಅಭಿಪ್ರಾಯದಲ್ಲಿ ಸಾಧ್ಯವಿದ್ದಾಗಲೆಲ್ಲ, ಮೂರನೇ ಪಕ್ಷದ ಸಾಮಗ್ರಿಗಳ ಮೂಲವನ್ನು ಗುರುತಿಸುತ್ತೇವೆ.  ಈ ಮೂರನೇ ಪಕ್ಷದ ಸಾಮಗ್ರಿಗಳನ್ನು ನಿಮ್ಮ ಆಸಕ್ತಿ ಮತ್ತು ಅನುಕೂಲಕ್ಕಾಗಿ ಮಾತ್ರ ನೀಡಲಾಗಿದೆ. ನಮಗೆ ಈ ಸಾಮಗ್ರಿಗಳನ್ನು ಪೂರೈಕೆ ಮಾಡುವ ಮಾರಾಟಗಾರರ ಪರ ಸಿಂಜೆಂಟಾ ಪ್ರಚಾರ ಮಾಡುವುದಿಲ್ಲ, ಅಥವಾ ಈ ಸಾಮಗ್ರಿಗಳು ಪ್ರಸ್ತುತ, ನಿಖರ, ಸಂಪೂರ್ಣ ಅಥವಾ ವಿಶ್ವಾಸಾರ್ಹ ಎಂದಾಗಲೀ ಸಿಂಜೆಂಟಾ ಖಾತ್ರಿಪಡಿಸುವುದಿಲ್ಲ ಅಥವಾ ಪ್ರತಿನಿಧಿಸುವುದಿಲ್ಲ. ಮೂರನೇ ಪಕ್ಷದ ಮಾಹಿತಿ ಒಳಗೊಂಡಿರುವ ಯಾವುದೇ ಬಳಕೆಗೆ ಸಿಂಜೆಂಟಾ ಯಾವುದೇ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ.

ಇತರ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳು

ಸಿಂಜೆಂಟಾ ಕಾರ್ಯಾಚರಣೆ ಮಾಡದಿರುವ ವೆಬ್‌ಸೈಟ್‌ಗಳಿಗೆ ಈ ಸೈಟ್ ಹೈಪರ್‌ಲಿಂಕ್‌ಗಳನ್ನು ಒಳಗೊಂಡಿರುತ್ತದೆ. ಈ ಹೈಪರ್‌ಲಿಂಕ್‌ಗಳನ್ನು ನಿಮ್ಮ ಉಲ್ಲೇಖ ಮತ್ತು ಅನುಕೂಲಕ್ಕಾಗಿ ಮಾತ್ರ ನೀಡಲಾಗಿದೆ ಹಾಗೂ ಈ ಮೂರನೇ ಪಕ್ಷದ ವೆಬ್‌ಸೈಟ್‌ಗಳ ಸಾಮಗ್ರಿಗಳಿಗೆ ಯಾವುದೇ ಪ್ರೋತ್ಸಾಹ ನೀಡುವುದಿಲ್ಲ ಅಥವಾ ಈ ಆಪರೇಟರ್‌ಗಳ ಜೊತೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ. ಸಿಂಜೆಂಟಾ ಈ ವೆಬ್‌ಸೈಟ್‌ಗಳನ್ನು ನಿಯಂತ್ರಿಸುವುದಿಲ್ಲ ಹಾಗೂ ಅವರ ಕಂಟೆಂಟ್‌ಗಳಿಗೆ ಜವಾಬ್ದಾರವಾಗಿರುವುದಿಲ್ಲ. ಈ ವೆಬ್‌ಸೈಟ್‌ಗಳನ್ನು ನೀವು ನಿಮ್ಮ ಸ್ವಂತ ಹೊಣೆಗಾರಿಕೆ ಮೇಲೆ ಪ್ರವೇಶಿಸುತ್ತೀರಿ ಮತ್ತು ಬಳಸುತ್ತೀರಿ.

ಉತ್ಪನ್ನ ಮಾಹಿತಿ

ಈ ವೆಬ್‌ಸೈಟ್‌ನಲ್ಲಿರುವ ಅಥವಾ ಉಲ್ಲೇಖಿಸಿರುವ ಮಾಹಿತಿ ಕೇವಲ ಸೂಚ್ಯವಾಗಿರುತ್ತವೆ ಮತ್ತು ಸಿಂಜೆಂಟಾಗೆ ಮತ್ತು ಅದರ ಉತ್ಪನ್ನಗಳು ಹಾಗೂ ಸೇವೆಗಳಿಗೆ ಪ್ರಸ್ತಾವನೆ ಎಂದು ಪರಿಗಣಿಸಬಾರದು. ನಮ್ಮ ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ನಿರ್ದಿಷ್ಟ ಸಲಹೆ ಮತ್ತು ಸೂಚನೆಗಳಿಗಾಗಿ ದಯವಿಟ್ಟು ಸಿಂಜೆಂಟಾವನ್ನು ನೇರವಾಗಿ ಸಂಪರ್ಕಿಸಿ. ಬೆಳೆ ರಕ್ಷಣೆ ಅಥವಾ ಬೀಜ ಉತ್ಪನ್ನವನ್ನು ಬಳಸಲು ಉದ್ದೇಶಿಸುವ ವ್ಯಕ್ತಿಗಳು ಆ ಉತ್ಪನ್ನದ ಜೊತೆಗಿರುವ ವಿವರಣೆಯನ್ನು ಕಡ್ಡಾಯವಾಗಿ ಓದಬೇಕು ಮತ್ತು ಅನುಸರಿಸಬೇಕು ಹಾಗೂ ಆ ಉತ್ಪನ್ನದ ಬಳಕೆಗೆ ಸಂಬಂಧಿಸಿ ಅನ್ವಯವಾಗುವ ಎಲ್ಲ ಕಾನೂನುಗಳು ಮತ್ತು ನಿಬಂಧನೆಗಳ ಪಾಲನೆ ಮಾಡಬೇಕು. ಯಾವುದೇ ಬೆಳೆ ರಕ್ಷಣೆ ಉತ್ಪನ್ನ ಬಳಸುವ ಮೊದಲು, ನಿಮ್ಮ ದೇಶದಲ್ಲಿ ಬಳಕೆಗೆ ಅದು ನೋಂದಣಿಯಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಜಾಗತಿಕ ಲಭ್ಯತೆ

ಜಗತ್ತಿನ ವಿವಿಧ ದೇಶಗಳು ವಿವಿಧ ಕಾನೂನುಗಳು ಮತ್ತು ನಿಬಂಧನೆ ಅಗತ್ಯಗಳನ್ನು ಹೊಂದಿರುವುದರಿಂದ, ಕೆಲವು ಉತ್ಪನ್ನಗಳು ಕೆಲವು ದೇಶಗಳಲ್ಲಿ ಮಾತ್ರ ಲಭ್ಯವಿರಬಹುದು ಇತರ ದೇಶಗಳಲ್ಲಿ ಲಭ್ಯವಿಲ್ಲದಿರಬಹುದು. ನಿಮ್ಮ ದೇಶದಲ್ಲಿ ಲಭ್ಯವಿರದ ಅಥವಾ ಘೋಷಣೆ ಮಾಡಿರದ ಸಿಂಜೆಂಟಾ ಉತ್ಪನ್ನಗಳು, ಕಾರ್ಯಕ್ರಮಗಳು ಮತ್ತು ಸೇವೆಗಳಿಗೆ ಈ ಸೈಟ್‌ ಉಲ್ಲೇಖಗಳು ಮತ್ತು ಪರ್ಯಾಯ ಉಲ್ಲೇಖಗಳನ್ನು ಒಳಗೊಂಡಿದೆ. ಅಂಥ ಉತ್ಪನ್ನಗಳು, ಕಾರ್ಯಕ್ರಮಗಳು ಅಥವಾ ಸೇವೆಗಳನ್ನು ನಿಮ್ಮ ದೇಶದಲ್ಲಿ ಘೋಷಿಸುವ ಉದ್ದೇಶವನ್ನು ಸಿಂಜೆಂಟಾ ಹೊಂದಿದೆ ಎಂದು ಈ ಉಲ್ಲೇಖಗಳು ಸೂಚಿಸುವುದಿಲ್ಲ. ನಿಮಗೆ ಯಾವ ಉತ್ಪನ್ನಗಳು, ಕಾರ್ಯಕ್ರಮಗಳು ಅಥವಾ ಸೇವೆಗಳು ಲಭ್ಯವಿವೆ ಎನ್ನುವ ಬಗ್ಗೆ ಪ್ರಶ್ನೆಗಳಿದ್ದರೆ, ನಿಮ್ಮ ಸ್ಥಳೀಯ ಸಿಂಜೆಂಟಾ ಮಾರಾಟ ಪ್ರತಿನಿಧಿಯೊಂದಿಗೆ ಮಾತನಾಡಿ ಅಥವಾ ಸಿಂಜೆಂಟಾವನ್ನು ಸಂಪರ್ಕಿಸಿ.

ವೆಬ್‌ಸೈಟ್ ಬದಲಿಸುವ ಹಕ್ಕು

ಯಾವುದೇ ಸಮಯದಲ್ಲಿ, ಯಾವುದೇ ಕಾರಣಕ್ಕಾಗಿ, ಯಾವುದೇ ಮುಂಚಿತ ಸೂಚನೆ ನೀಡದೆ ಈ ವೆಬ್‌ಸೈಟ್‌ನ ಕಂಟೆಂಟ್‌ ಮತ್ತು ಕಾರ್ಯನಿರ್ವಹಣೆಯನ್ನು ಯಾವುದೇ ರೀತಿಯಲ್ಲಿ ಬದಲಿಸುವ, ಅಥವಾ ಈ ವೆಬ್‌ಸೈಟ್‌ಗೆ ಪ್ರವೇಶ ನಿರ್ಬಂಧಿಸುವ, ಅಥವಾ ಈ ವೆಬ್‌ಸೈಟ್‌ ಅನ್ನು ಸ್ಥಗಿತಗೊಳಿಸುವ ಹಕ್ಕನ್ನು ಸಿಂಜೆಂಟಾ ಕಾಯ್ದಿರಿಸಿದೆ ಮತ್ತು ಅಂಥ ಬದಲಾವಣೆಗಳಿಂದ ಉಂಟಾಗುವ ಸಂಭಾವ್ಯ ಪರಿಣಾಮಗಳಿಗೆ ಯಾವುದೇ ರೀತಿಯಲ್ಲಿ ಹೊಣೆಗಾರನಾಗಿರುವುದಿಲ್ಲ.  

ಹೂಡಿಕೆ ಮಾಡಲು ಆಫರ್ ಅಥವಾ ಆಹ್ವಾನ ಅಲ್ಲ

ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ಹೂಡಿಕೆ ಮಾಡಲು ಅಥವಾ ಇಲ್ಲದೇ ಹೋದಲ್ಲಿ ಸಿಂಜೆಂಟಾದ ಷೇರುಗಳು ಮತ್ತು ಇತರ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡಲು ಆಫರ್‌ ಅಥವಾ ಆಹ್ವಾನ ಎಂದು ಪರಿಗಣಿಸಬಾರದು.  ಅಂಥ ಯಾವುದೇ ಆಫರ್‌ ಅಥವಾ ಆಹ್ವಾನವನ್ನು ಮಾಡುತ್ತಿಲ್ಲ ಅಥವಾ ಕೋರುತ್ತಿಲ್ಲ. ಷೇರು ಬೆಲೆಗಳು ಮತ್ತು ಆ ಷೇರುಗಳಿಂದ ಆದಾಯ  ಯಾವುದೇ ಸಮಯದಲ್ಲಿ ಏರಿಳಿಕೆಯಾಗಬಹುದು, ಮತ್ತು ಹಿಂದಿನ ಕಾರ್ಯಸಾಮರ್ಥ್ಯವು ಭವಿಷ್ಯದ ಕಾರ್ಯಸಾಮರ್ಥ್ಯದ ಸೂಚನೆಯಾಗಿರಬೇಕಿಲ್ಲ ಎನ್ನುವುದನ್ನು ಸಂಭಾವ್ಯ ಹೂಡಿಕೆದಾರರು ತಿಳಿದುಕೊಂಡಿರಬೇಕು. ಯಾವುದೇ ಹೂಡಿಕೆ ನಿರ್ಧಾರಕ್ಕೆ ಮುಂಚೆ ಸಂಭಾವ್ಯ ಹೂಡಿಕೆದಾರರು ಸ್ವತಂತ್ರ ಹಣಕಾಸು ಸಲಹೆಗಾರರಿಂದ ಸಲಹೆ ಪಡೆಯಬೇಕು.

ಮುನ್ನೋಟದ ಹೇಳಿಕೆಗಳು

ನಮ್ಮ ವೆಬ್‌ಸೈಟ್‌ ಮುನ್ನೋಟದ ಹೇಳಿಕೆಗಳನ್ನು ಹೊಂದಿರಬಹುದು-  ಅಂದರೆ ನಮ್ಮ ನಂಬಿಕೆಗಳು ಮತ್ತು ನಿರೀಕ್ಷೆಗಳು ಸೇರಿದಂತೆ, ಐತಿಹಾಸಿಕ ವಾಸ್ತವವಲ್ಲದ ಹೇಳಿಕೆಗಳು.  ಈ ಹೇಳಿಕೆಗಳು ಪ್ರಸ್ತುತ ಯೋಜನೆಗಳು, ಅಂದಾಜುಗಳು ಮತ್ತು ನಿರೀಕ್ಷೆಗಳನ್ನು ಆಧರಿಸಿರುತ್ತವೆ, ಹಾಗಾಗಿ ಓದುಗರು ಅವುಗಳ ಮೇಲೆ ಅನಗತ್ಯ ಅವಲಂಬನೆ ಮಾಡಬಾರದು. ಈ ಹೇಳಿಕೆಗಳು ಅಡಕವಾಗಿರುವ ಅಪಾಯಗಳು ಮತ್ತು ಅನಿಶ್ಚಿತಗಳನ್ನು ಒಳಗೊಂಡಿರುತ್ತವೆ, ಅವುಗಳಲ್ಲಿ ಹಲವು ಸಿಂಜೆಂಟಾದ ನಿಯಂತ್ರಣಕ್ಕೆ ಮೀರಿರುತ್ತವೆ. ಯು.ಎಸ್‌. ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್‌ ಕಮಿಷನ್‌ನ ನಮ್ಮ ಫೈಲಿಂಗ್‌ಗಳಲ್ಲಿ, ಈ ಮುನ್ನೋಟದ ಹೇಳಿಕೆಗಳಲ್ಲಿ ಇರುವುದಕ್ಕಿಂತ ನೈಜ ಫಲಿತಾಂಶಗಳು ಬದಲಾಗಲು ವಾಸ್ತವಿಕವಾಗಿ ಕಾರಣವಾಗಬಹುದಾದ ನಿರ್ದಿಷ್ಟ ಅಂಶಗಳನ್ನು ನಾವು ಗುರುತಿಸಿದ್ದೇವೆ.  ಮುನ್ನೋಟದ ಹೇಳಿಕೆಗಳು ಅವುಗಳನ್ನು ನೀಡಿದ ದಿನಾಂಕದ ಅನುಸಾರವಾಗಿ ಮಾತ್ರ ವಿಷಯವನ್ನು ಹೇಳುತ್ತವೆ ಮತ್ತು ಹೊಸ ಮಾಹಿತಿ ಅಥವಾ ಭವಿಷ್ಯದ ಸನ್ನಿವೇಶಗಳ ಹಿನ್ನೆಲೆಯಲ್ಲಿ ನವೀಕರಿಸಲು ನಾವು ಯಾವುದೇ ಬಾಧ್ಯತೆಗಳನ್ನು ಸ್ವೀಕರಿಸುವುದಿಲ್ಲ.

ವಾರಂಟಿಗಳ ಹಕ್ಕು ನಿರಾಕರಣೆ

ಈ ವೆಬ್‌ಸೈಟ್‌ ಅನ್ನು ಯಾವುದೇ ರೀತಿಯ ವಾರಂಟಿಗಳಿಲ್ಲದೆ “ಇದ್ದ ಹಾಗೆ”, “ಲಭ್ಯವಿರುವ ರೀತಿ” ಆಧಾರದಲ್ಲಿ ಒದಗಿಸಲಾಗಿದೆ.   ಅನ್ವಯವಾಗುವ ಕಾನೂನುಗಳಿಗೆ ಸಾಧ್ಯವಿರುವ ಪೂರ್ಣ ಅನುಸರಣೆಯಲ್ಲಿ ವ್ಯಾಪಾರಾರ್ಹತೆಯ ಸೂಚಿತ ವಾರಂಟಿಗಳು, ಒಂದು ನಿರ್ದಿಷ್ಟ ಉದ್ದೇಶಕ್ಕೆ ಸೂಕ್ತವಾಗಿರುವಿಕೆ ಮತ್ತು ಉಲ್ಲಂಘನೆ ಮಾಡದಿರುವಿಕೆ ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಸ್ಪಷ್ಟ, ಸೂಚ್ಯ ಅಥವಾ ಶಾಸನಾತ್ಮಕವಾದ ಎಲ್ಲ ವಾರಂಟಿಗಳನ್ನು ಸಿಂಜೆಂಟಾ ಮತ್ತು ಅದರ ಸಹಸಂಸ್ಥೆಗಳು ನಿರಾಕರಿಸುತ್ತವೆ. ಮೇಲೆ ಹೇಳಿದ್ದಕ್ಕೆ ಮಿತಿಗೊಳಿಸದೆ, ಈ ವೆಬ್‌ಸೈಟ್‌ ಯಾವುದೇ ನಿರ್ದಿಷ್ಟ ಸಮಯದಲ್ಲಿ ಅಥವಾ ಸ್ಥಳದಲ್ಲಿ ಲಭ್ಯವಿರುತ್ತದೆ ಅನ್ನುವ ಅಥವಾ ಅದರ ಕಾರ್ಯಾಚರಣೆಗಳು ಅಡಚಣೆ ರಹಿತ ಅಥವಾ ದೋಷಮುಕ್ತವಾಗಿರುತ್ತವೆ ಅನ್ನುವ ವಾರಂಟಿಯನ್ನು ಸಿಂಜೆಂಟಾ ನೀಡುವುದಿಲ್ಲ ಅಥವಾ ಪ್ರತಿನಿಧಿತ್ವ ಮಾಡುವುದಿಲ್ಲ.  ಈ ಸೈಟ್‌ನ ಕಂಟೆಂಟ್‌ಗಳು ವೈರಸ್‌ಗಳು, ವರ್ಮ್‌ಗಳು ಅಥವಾ ಕಲುಷಿತಗೊಳಿಸುವ ಅಥವಾ ನಾಶಪಡಿಸುವ ಲಕ್ಷಣಗಳನ್ನು ಉತ್ಪಾದಿಸಬಹುದಾದ ಇತರ ಕೋಡ್‌ಗಳಿಂದ ಮುಕ್ತವಾಗಿದೆ ಎಂದು ಸಿಂಜೆಂಟಾ ವಾರಂಟಿ ನೀಡುವುದಿಲ್ಲ ಅಥವಾ ಪ್ರತಿನಿಧಿತ್ವ ಮಾಡುವುದಿಲ್ಲ. ನಿಖರ ಮತ್ತು ಅಪ್‌-ಟು-ಡೇಟ್ ಮಾಹಿತಿಯನ್ನು ಒದಗಿಸಲು ಸಿಂಜೆಂಟಾ ಅತ್ಯುತ್ತಮ ಪ್ರಯತ್ನ ಮಾಡಿದ್ದರೂ ಮತ್ತು ಅದನ್ನು ಮುಂದುವರಿಸುತ್ತದಾದರೂ ಸಹ, ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿ ಅಪೂರ್ಣವಾಗಿರಬಹುದು ಅಥವಾ ಹಳತಾಗಿರಬಹುದು ಮತ್ತು ಅಸಪರ್ಮಕತೆ ಮತ್ತು ಟೈಪೊಗ್ರಫಿಕಲ್‌ ದೋಷಗಳನ್ನು ಹೊಂದಿರಬಹುದು. ಈ ವೆಬ್‌ಸೈಟ್‌ನ ಬಳಕೆ, ಮಾನ್ಯತೆ, ನಿಖರತೆ, ಮೌಲ್ಯ ಅಥವಾ ವಿಶ್ವಾಸಾರ್ಹತೆ ಅಥವಾ ಅದರ ಬಳಕೆಯ ಫಲಿತಾಂಶ, ಅಥವಾ ಇಲ್ಲದೇ ಹೋದಲ್ಲಿ ಗೌರವಿಸುವ ಅಥವಾ ಈ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಯಾವುದೇ ಮಾಹಿತಿಗೆ ಸಂಬಂಧಿಸಿ ಸಿಂಜೆಂಟಾ ಯಾವುದೇ ವಾರಂಟಿ ನೀಡುವುದಿಲ್ಲ ಅಥವಾ ಪ್ರತಿನಿಧಿತ್ವ ಮಾಡುವುದಿಲ್ಲ. 

ಹೊಣೆಗಾರಿಕೆಯ ಮಿತಿ

ಈ ವೆಬ್‌ಸೈಟ್‌ನ ಬಳಕೆ ನಿಮ್ಮ ಸ್ವಂತ ಹೊಣೆಗಾರಿಕೆಗೆ ಒಳಪಟ್ಟಿರುತ್ತದೆ. ಈ ವೆಬ್‌ಸೈಟ್‌ನ ಬಳಕೆ ಅಥವಾ ಈ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಮಾಹಿತಿಯ ಮೇಲೆ ನಿಮ್ಮ ಅವಲಂಬನೆಯಿಂದ ಉಂಟಾಗಬಹುದಾದ ಯಾವುದೇ ಪ್ರತ್ಯಕ್ಷ ಅಥವಾ ಪರೋಕ್ಷ ನಷ್ಟಗಳು ಅಥವಾ ಹಾನಿಗಳಿಗೆ ಯಾವುದೇ ಸಂದರ್ಭದಲ್ಲೂ, ಸಿಂಜೆಂಟಾ, ಅದರ ಸಹಸಂಸ್ಥೆಗಳು ಅಥವಾ ಅದರ ಯಾವುದೇ ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು ಅಥವಾ ಏಜೆಂಟರು ಹೊಣೆಗಾರರಾಗಿರುವುದಿಲ್ಲ. ಮೇಲೆ ಹೇಳಿದ್ದಕ್ಕೆ ಮಿತಿಗೊಳಿಸದೆ, ಸೈಟ್‌ನ ಕಂಟೆಂಟ್‌ನಲ್ಲಿರುವ ಸಂಭಾವ್ಯ ತಪ್ಪುಗಳು ಅಥವಾ ಬಿಟ್ಟುಹೋಗಿರುವ ವಿಷಯಗಳಿಗೆ ಯಾವುದೇ ರೀತಿಯಲ್ಲಿ ಸಿಂಜೆಂಟಾ ಹೊಣೆಗಾರವಾಗಿರುವುದಿಲ್ಲ; ಇದು ನಿರ್ದಿಷ್ಟವಾಗಿ ಸಿಂಜೆಂಟಾ ಪೂರೈಸುವ ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿ ಅನ್ವಯವಾಗುತ್ತದೆ. ಡೇಟಾ, ಆದಾಯ ಅಥವಾ ಲಾಭಗಳ ನಷ್ಟ ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ನೇರ ಅಥವಾ ಪರೋಕ್ಷವಾದ ಸಾಮಾನ್ಯ, ವಿಶೇಷ, ಆಕಸ್ಮಿಕ, ಪ್ರಾಸಂಗಿಕ, ಅಸಾಮಾನ್ಯ ಅಥವಾ ಇತರ ಯಾವುದೇ ನೇರ ಅಥವ ಪರೋಕ್ಷ ನಷ್ಟಗಳು ಮತ್ತು ಹಾನಿಗಳಿಗೆ ಅನ್ವಯವಾಗುವ ಹೊಣೆಗಾರಿಕೆಗೆ ಇದು ಸಮಗ್ರ ಮಿತಿಯಾಗಿರುತ್ತದೆ. ಹೇಳಲಾಗಿರುವ ಹೊಣೆಗಾರಿಕೆ ಕರಾರು, ನಿರ್ಲಕ್ಷ್ಯ, ತಕ್ಸೀರು, ಕಟ್ಟುನಿಟ್ಟಿನ ಹೊಣೆಗಾರಿಕೆ ಅಥವಾ ಇತರ ಯಾವುದನ್ನು ಆಧರಿಸಿದ್ದರೂ ಮತ್ತು ಸಿಂಜೆಂಟಾದ ಅಥವಾ ಅದರ ಸಹಸಂಸ್ಥೆಗಳ ಅಧಿಕೃತ ಪ್ರತಿನಿಧಿಗಳಿಗೆ ಅಂಥ ಹಾನಿಗಳ ಸಂಭಾವ್ಯತೆಯ ಬಗ್ಗೆ ತಿಳಿದಿದ್ದರೂ ಅಥವಾ ಗಮನಕ್ಕೆ ತರಲಾಗಿದ್ದರೂ ಸಹ ಈ ಹೊಣೆಗಾರಿಕೆಯ ಮಿತಿ ಅನ್ವಯವಾಗುತ್ತದೆ.

ಮೇಲೆ ಹೇಳಿರುವ ಹೊಣೆಗಾರಿಕೆಯ ಮಿತಿಗೆ ಕೆಲವು ದೇಶಗಳು ಅಥವಾ ಕೆಲವು ದೇಶಗಳ ರಾಜಕೀಯ ಉಪಗುಂಪುಗಳು ಅವಕಾಶ ನೀಡುವುದಿಲ್ಲ, ಆದ್ದರಿಂದ ಈ ಹೊಣೆಗಾರಿಕೆಯ ಮಿತಿ ನಿಮಗೆ ಅನ್ವತವಾಗದಿರಬಹುದು. ಒಂದು ವೇಳೆ ಈ ಹೊಣೆಗಾರಿಕೆ ಮಿತಿಯ ಯಾವುದೇ ಭಾಗ ಅಮಾನ್ಯವಾಗಿದ್ದರೆ ಅಥವಾ ಯಾವುದೇ ಕಾರಣಕ್ಕಾಗಿ ಮುಂಗಾಣಲಾಗದಾಗಿದ್ದರೆ, ಆಗ ಇಲ್ಲದೆ ಹೋದಲ್ಲಿ ಸೀಮಿತವಾಗಿರುತ್ತಿದ್ದ ಅಂಥ ಪರಿಸ್ಥಿತಿಗಳಡಿಯ ಸಿಂಜೆಂಟಾ ಮತ್ತು/ಅಥವಾ ಅದರ ಸಹಸಂಸ್ಥೆಗಳ ಸಮಗ್ರ ಹೊಣೆಗಾರಿಕೆಯು ಒಂದು ನೂರು ($100.00) ಡಾಲರ್‌ಗಳಿಗೆ ಮೀರುವುದಿಲ್ಲ.

ಸಂಪೂರ್ಣ ಒಪ್ಪಂದ

ವೆಬ್‌ಸೈಟ್‌ಗೆ ನಿಮ್ಮ ಪ್ರವೇಶ ಮತ್ತು/ಅಥವಾ ಬಳಕೆಗೆ ಸಂಬಂಧಿಸಿ ನಿಮ್ಮ ಮತ್ತು ಸಿಂಜೆಂಟಾದ ನಡುವೆ ಈ ಒಪ್ಪಂದ ಸಂಪೂರ್ಣ ಒಪ್ಪಂದವಾಗಿರುತ್ತದೆ.

ಜಾರಿಯ ದಿನಾಂಕ

ಮೇಲೆ ಹೇಳಿರುವ ನಿಯಮಗಳು ಮತ್ತು ಷರತ್ತುಗಳು ಜನವರಿ 2016ರಿಂದ ಜಾರಿಗೆ ಬರುತ್ತವೆ.

ಆಡಳಿತ ಕಾನೂನು

ಮೇಲೆ ಹೇಳಲಾಗಿರುವ ನಿಯಮಗಳು ಮತ್ತು ಷರತ್ತುಗಳು, ಭಾರತದ ಕಾನೂನುಗಳ ಅನುಸಾರ ಮೇಲ್ವಿಚಾರಣೆ ನಡೆಸಲ್ಪಡುತ್ತವೆ, ಅವುಗಳ ಅನುಸಾರ ಅರ್ಥಹೊಂದಿರುತ್ತವೆ ಮತ್ತು ಅವುಗಳಿಗೆ ಒಳಪಟ್ಟಿರುತ್ತವೆ ಹಾಗೂ ಈ ಕರಾರಿನಿಂದ ಉದ್ಭವಿಸುವ ಯಾವುದೇ ವಿವಾದವನ್ನು ವಿಚಾರಣೆಗೆ ಸ್ವೀಕರಿಸಲು ಮತ್ತು ವಿಚಾರಣೆ ನಡೆಸಲು ಪುಣೆ ಕೋರ್ಟ್‌ಗಳು ಅನನ್ಯ ಕಾನೂನುವ್ಯಾಪ್ತಿ ಹೊಂದಿರುತ್ತವೆ.