ಗೌಪ್ಯತಾ-ನೀತಿ

ಪ್ರಸ್ತಾವನೆ

www.syngenta.co.in (“ಸೈಟ್”) ಸಿಂಜೆಂಟಾ ಇಂಡಿಯಾ ಲಿಮಿಟೆಡ್ (“ಸಿಂಜೆಂಟಾ”) ಇವರ ಮಾಲೀಕತ್ವದ್ದಾಗಿದೆ ಮತ್ತು ಇವರಿಂದ ಕಾರ್ಯಾಚರಿಸಲ್ಪಡುತ್ತಿದೆ. ಸಿಂಜೆಂಟಾದ ಸೈಟ್‌ಗೆ ಭೇಟಿ ನೀಡುವ ವ್ಯಕ್ತಿಗಳ ಗೌಪ್ಯತೆಗೆ ಸಿಂಜೆಂಟಾ ಮನ್ನಣೆ ನೀಡುತ್ತದೆ ಮತ್ತು ಸೈಟ್ ಬಳಸುವ ವ್ಯಕ್ತಿಗಳ ವೈಯಕ್ತಿಕ ಗೌಪ್ಯತೆಗೆ ಸಂಬಂಧಿಸಿ ಇರುವ ಕಾನೂನು ಅಗತ್ಯಗಳನ್ನು ಪೂರೈಸಲು ಬದ್ಧವಾಗಿದೆ. ಸೈಟ್‌ನ ಮೂಲಕ ಸಿಂಜೆಂಟಾ ಸಂಗ್ರಹಿಸುವ ವೈಯಕ್ತಿಕ ಡೇಟಾಗೆ ಸಂಬಂಧಿಸಿ ಸಿಂಜೆಂಟಾದ ಪ್ರಸ್ತುತ ನೀತಿಗಳು ಮತ್ತು ಆಚರಣೆಗಳನ್ನು ಈ ಗೌಪ್ಯತಾ ಹೇಳಿಕೆ ವಿವರಿಸುತ್ತದೆ. 

ವ್ಯಾಖ್ಯಾನ:

ಈ ನೀತಿಯಲ್ಲಿ, “ಸಿಂಜೆಂಟಾ” ಅನ್ನುವ ಪದ ಸಿಂಜೆಂಟಾ ಇಂಡಿಯಾ ಲಿಮಿಟೆಡ್ ಮತ್ತು ಅದರ ಅಂಗಸಂಸ್ಥೆಗಳು ಮತ್ತು ಸಹಸಂಸ್ಥೆಗಳನ್ನು ಉಲ್ಲೇಖಿಸುತ್ತದೆ.  “ಸೈಟ್” ಎನ್ನುವುದು www.syngenta.co.in ಅನ್ನು ಉಲ್ಲೇಖಿಸುತ್ತದೆ “ವೈಯಕ್ತಿಕ ಡೇಟಾ” ಅಂದರೆ ಗುರುತಿಸಿರುವ ಅಥವಾ ಗುರುತಿಸಬಹುದಾದ ಸಹಜ ಅಥವಾ ಕಾನೂನುಬದ್ಧ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿ, ಉದಾಹರಣೆಗೆ, ವ್ಯಕ್ತಿಯ ಹೆಸರು, ವಯಸ್ಸು, ಇ-ಮೇಲ್ ವಿಳಾಸ ಅಥವಾ ಅಂಚೆ ವಿಳಾಸ.

ನಿಮ್ಮ ಸಮ್ಮತಿ:

ಈ ಗೌಪ್ಯತಾ ನೀತಿ www.syngenta.co.in ನಲ್ಲಿ ಸೇರಿಸಲಾಗಿದೆ ಮತ್ತು ಅದರ ಹಾಗೂ ಬಳಕೆಯ ಷರತ್ತುಗಳ ಭಾಗವಾಗಿದೆ. ಈ ಸೈಟ್ ಬಳಸುವ ಮೂಲಕ, ಈ ಗೌಪ್ಯತಾ ಹೇಳಿಕೆಯಲ್ಲಿ ವಿವರಿಸಲಾಗಿರುವಂತೆ ನಿಮ್ಮ ವೈಯಕ್ತಿಕ ಡೇಟಾದ ಸಂಗ್ರಹ, ಬಳಕೆ ಮತ್ತು ಬಹಿರಂಗಪಡಿಸುವಿಕೆಗೆ ನೀವು ಸಮ್ಮತಿಸುತ್ತೀರಿ. ಅದಾಗ್ಯೂ, ಇದು ಸೈಟ್ನಲ್ಲಿ ಪ್ರಕಟಿಸಿರಬಹುದಾದ ವೈಯಕ್ತಿಕ ಡೇಟಾಗೆ ಸಂಬಂಧಿಸಿದ ನಿರ್ದಿಷ್ಟ ಹೇಳಿಕೆಗಳಿಗೆ ಒಳಪಟ್ಟಿರುತ್ತದೆ. ಒಂದು ವೇಳೆ ವೈಯಕ್ತಿಕ ಡೇಟಾಗೆ ಸಂಬಂಧಿಸಿ ಅಂಥ ನಿರ್ದಿಷ್ಟ ಹೇಳಿಕೆಗಳನ್ನು ನೀಡಲ್ಪಟ್ಟಿದ್ದಲ್ಲಿ, ಈ ಗೌಪ್ಯತಾ ನೀತಿಗೆ ಸಂಬಂಧಿಸಿ ಯಾವುದೇ ವ್ಯತ್ಯಾಸದ ಸಂಘರ್ಷ ಉಂಟಾದ ಸಂದರ್ಭದಲ್ಲಿ ಅವು ಮಾನ್ಯತೆ ಹೊಂದಿರುತ್ತವೆ. 

ಗೌಪ್ಯತಾ ನೀತಿಯ ಬದಲಾವಣೆಯ ಅಧಿಸೂಚನೆ:

ತನ್ನ ಸೈಟ್ ಅನ್ನು ನಿರಂತರವಾಗಿ ಸುಧಾರಿಸಲು ಮತ್ತು ಹೊಸ ಕಾರ್ಯಗಳು ಮತ್ತು ವೈಶಿಷ್ಟ್ಯಗಳನ್ನು ಸೇರಿಸಲು ಸಿಂಜೆಂಟಾ ಪ್ರಯತ್ನಿಸುತ್ತದೆ. ಈ ನಿರಂತರ ಸುಧಾರಣೆಗಳು, ಕಾನೂನಿನಲ್ಲಿನ ಬದಲಾವಣೆಗಳು ಅಥವಾ ತಂತ್ರಜ್ಞಾನದಲ್ಲಿನ ಬದಲಾವಣೆಗಳಿಂದಾಗಿ ಈ ಗೌಪ್ಯತಾ ಹೇಳಿಕೆಗೆ ಬದಲಾವಣೆಗಳನ್ನು ಮಾಡಬೇಕಾಗಬಹುದು.
ಯಾವುದೇ ಸೂಚನೆ ನೀಡದೆ ಯಾವುದೇ ಸಮಯದಲ್ಲಾದರೂ ಈ ಗೌಪ್ಯತಾ ಹೇಳಿಕೆಯನ್ನು ನವೀಕರಿಸುವ ಅಥವಾ ಬದಲಾವಣೆ ಮಾಡುವ ಹಕ್ಕನ್ನು ಸಿಂಜೆಂಟಾ ಕಾಯ್ದಿರಿಸಿರುತ್ತದೆ.  ಈ ಕಾರಣಕ್ಕಾಗಿ, ನೀವು ಈ ಸೈಟ್ ಅನ್ನು ಪ್ರತಿ ಬಾರಿ ಬಳಸುವಾಗಲೂ ಈ ಗೌಪ್ಯತಾ ಹೇಳಿಕೆಯನ್ನು ಪರಿಶೀಲಿಸುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಈ ಸೈಟ್‌ನಲ್ಲಿ ಪ್ರತಿ ಪುಟದ ಕೆಳಗೆ ಇರುವ “ಪ್ರೈವಸಿ ಸ್ಟೇಟ್ಮೆಂಟ್” ಬಟನ್ ಕ್ಲಿಕ್ ಮಾಡುವ ಮೂಲಕ ಯಾವುದೇ ಸಮಯದಲ್ಲಾದರೂ ನೀವು ಈ ಗೌಪ್ಯತಾ ಹೇಳಿಕೆಯ ಪ್ರಸ್ತುತ ಆವೃತ್ತಿಯನ್ನು ಪ್ರವೇಶಿಸಬಹುದು.
ಅಂಥ ಯಾವುದೇ ಬದಲಾವಣೆ ನಂತರದ ಸೈಟ್‌ನ ಬಳಕೆಯು, ಪರಿಷ್ಕೃತ ಗೌಪ್ಯತಾ ಹೇಳಿಕೆ ಪ್ರಕಟಿಸಿದ ಬಳಿಕ ಸೈಟ್‌ನಿಂದ ಅಥವಾ ಸೈಟ್‌ನ ಮೂಲಕ ಸಂಗ್ರಹಿಸಲಾದ ವೈಯಕ್ತಿಕ ಡೇಟಾ ಪರಿಷ್ಕೃತ ಗೌಪ್ಯತಾ ಹೇಳಿಕೆಯ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ ಎನ್ನುವುದಕ್ಕೆ ನೀವು ಸಮ್ಮತಿಸುತ್ತೀರಿ. ಅದಾಗ್ಯೂ, ಪರಿಷ್ಕೃತ ಗೌಪ್ಯತಾ ಹೇಳಿಕೆ ಈ ಸೈಟ್‌ನಲ್ಲಿ ಪ್ರಕಟವಾಗುವುದಕ್ಕಿಂತ ಮುಂಚೆ ಸಿಂಜೆಂಟಾ ಸಂಗ್ರಹಿಸಿದ ಯಾವುದೇ ವೈಯಕ್ತಿಕ ಡೇಟಾಗೆ ಈ ಗೌಪ್ಯತಾ ಹೇಳಿಕೆಯಲ್ಲಿನ ಬದಲಾವಣೆಗಳನ್ನು ಸಿಂಜೆಂಟಾ ಅನ್ವಯಿಸುವುದಿಲ್ಲ.

ವೈಬ್‌ಸೈಟ್‌ ಮೂಲಕ ಸಂಗ್ರಹಿಸಲಾದ ವೈಯಕ್ತಿಕ ಡೇಟಾ:

i.                    ನೀವು ಒದಗಿಸುವ ವೈಯಕ್ತಿಕ ಡೇಟಾ:

ಈ ಸೈಟ್‌ ಬಳಸಿದಾಗ ನೀವು ಒದಗಿಸುವ ವೈಯಕ್ತಿಕ ಡೇಟಾವನ್ನು ಸಿಂಜೆಂಟಾ ಸಂಗ್ರಹಿಸುತ್ತದೆ. ಈ ವೈಯಕ್ತಿಕ ಡೇಟಾದಲ್ಲಿ ಉದಾಹರಣೆಗೆ, ನಿಮ್ಮ ಹೆಸರು, ನಿಮ್ಮ ಕಂಪನಿಯ ಹೆಸರು, ನಿಮ್ಮ ಅಥವಾ ನಿಮ್ಮ ಕಂಪನಿಯ ಅಂಚೆ ವಿಳಾಸ, ಮತ್ತು ನಿಮ್ಮ ಇ-ಮೇಲ್ ವಿಳಾಸ ಸೇರಿರಬಹುದು. ಈ ಗೌಪ್ಯತಾ ಹೇಳಿಕೆಯಲ್ಲಿರುವ ವಿಷಯಗಳಿಗೆ ಒಳಪಟ್ಟು, ನಿಮ್ಮ ವೈಯಕ್ತಿಕ ಡೇಟಾವನ್ನು ಕಟ್ಟುನಿಟ್ಟಾಗಿ ಗೌಪ್ಯವಾಗಿ ಇರಿಸಲಾಗುತ್ತದೆ. ನೀವು ಈ ಸೈಟ್ ಬಳಸಿದಾಗ ಒದಗಿಸುವ ಡೇಟಾವನ್ನು ನೀವು ವಿನಂತಿ ಮಾಡಬಹುದಾದ ಮಾಹಿತಿ, ಸೇವೆಗಳು ಮತ್ತು ಉತ್ಪನ್ನಗಳನ್ನು ಒದಗಿಸಲು ಸಿಂಜೆಂಟಾ ಬಳಸುತ್ತದೆ. ಉದಾಹರಣೆಗೆ, ನಿಮ್ಮ ಅಭಿಪ್ರಾಯಗಳು ಮತ್ತು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಾವು ನಿಮ್ಮ ಇ-ಮೇಲ್ ವಿಳಾಸವನ್ನು ಬಳಸಬಹುದು. ಕೆಲವು ಪ್ರಕರಣಗಳಲ್ಲಿ, ಪ್ರಚಾರ ಇವೆಂಟ್‌ಗಳಿಗೆ ನೋಂದಣಿಗೆ ಸೈಟ್‌ ಅವಕಾಶ ನೀಡಬಹುದು; ಕರಪತ್ರಗಳು, ನಕ್ಷೆಗಳು ಮತ್ತು ಇವೆಂಟ್ ಮಾಹಿತಿಯನ್ನು ಒದಗಿಸಲು ನಾವು ನಿಮ್ಮ ಇ-ಮೇಲ್ ಅಥವಾ ಅಂಚೆ ವಿಳಾಸವನ್ನು ಬಳಸಬಹುದು.

ಈ ಸೈಟ್‌ನ ವಿಷಯಗಳು ಮತ್ತು ಕಾರ್ಯವನ್ನು ಸುಧಾರಿಸಲು, ನಮ್ಮ ಗ್ರಾಹಕರು ಮತ್ತು ಮಾರುಕಟ್ಟೆಗಳನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಸುಧಾರಿಸಲು ಹಾಗೂ ಈ ಸೈಟ್‌ನ ನೋಂದಾಯಿತ ಬಳಕೆದಾರರೂ ಸೇರಿದಂತೆ, ನಮ್ಮ ಗ್ರಾಹಕರು ಹಾಗೂ ಸಂಭಾವ್ಯ ಗ್ರಾಹಕರಿಗೆ ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಮಾರಾಟ ಮಾಡಲು ಕೂಡ ಸಿಂಜೆಂಟಾ ಈ ಸೈಟ್‌ನ ಮೂಲಕ ಕಲೆ ಹಾಕಲಾದ ವೈಯಕ್ತಿಕ ಡೇಟಾವನ್ನು ಬಳಸುತ್ತದೆ.  ಕೃಷಿ ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ಮಾಹಿತಿಯೊಂದಿಗೆ ನಾವು ಆಗಾಗ ನಿಮ್ಮನ್ನು ಸಂಪರ್ಕಿಸಬಹುದು. ಅಂಥ ಉದ್ದೇಶಗಳಿಗಾಗಿ ನಾವು ನಿಮ್ಮನ್ನು ಸಂಪರ್ಕಿಸಬಾರದು ಎಂದು ನೀವು ಅಭಿಪ್ರಾಯಪಟ್ಟರೆ, ನಮ್ಮ ವೆಬ್‌ಮಾಸ್ಟರ್ ಮೂಲಕ ದಯವಿಟ್ಟು ನಮಗೆ ತಿಳಿಸಿ.

ii.                  ಕ್ಲಿಕ್ ಸ್ಟ್ರೀಮ್ ಡೇಟಾ:

ಈ ಸೈಟ್‌ನ ನಿಮ್ಮ ಬಳಕೆಯನ್ನು ಟ್ರ್ಯಾಕ್ ಮಾಡಲು ಸಿಂಜೆಂಟಾ ತಂತ್ರಜ್ಞಾನವನ್ನು ಬಳಸುತ್ತದೆ, ಉದಾಹರಣೆಗೆ ನೀವು ಯಾವ ಪುಟಗಳನ್ನು ನೋಡುತ್ತೀರಿ ಮತ್ತು ಯಾವ ಲಿಂಕ್‌ಗಳನ್ನು ಬಳಸುತ್ತೀರಿ ಎನ್ನುವುದು. ಈ ಸೈಟ್‌ನ ನಿಮ್ಮ ಬಳಕೆಗೆ ಸಂಬಂಧಿಸಿದ ಈ ಮಾಹಿತಿಯನ್ನು “ಕ್ಲಿಕ್‌-ಸ್ಟ್ರೀಮ್‌ ಡೇಟಾ” ಎಂದು ಕರೆಯಲಾಗುತ್ತದೆ. ನಿಮಗೆ ಯಾವುದು ಮುಖ್ಯ ಮತ್ತು ಯಾವುದು ಮುಖ್ಯವಲ್ಲ ಎನ್ನುವುದನ್ನು ನಿರ್ಧರಿಸಲು ಕ್ಲಿಕ್‌-ಸ್ಟ್ರೀಮ್ ಡೇಟಾ ನಮಗೆ ನರೆವಾಗುತ್ತದೆ. ಯಾವ ವಿಷಯ ಮತ್ತು ವೈಶಿಷ್ಟ್ಯಗಳನ್ನು ಸೇರಿಸಬೇಕು ಮತ್ತು ಯಾವುದನ್ನು ತೆಗೆದುಹಾಕಬೇಕು ಎನ್ನುವುದನ್ನು ನಿರ್ಧರಿಸಲು ಇದು ನಮಗೆ ಸಹಾಯ ಮಾಡುತ್ತದೆ. ನಮ್ಮ ಸೈಟ್‌ ಬಳಸಲು ಸುಲಭವಾಗಿದೆಯೇ ಅಥವಾ ಕೆಲವು ಪುಟಗಳು ಮತ್ತು ಲಿಂಕ್‌ಗಳನ್ನು ಮರುವಿನ್ಯಾಸಗೊಳಿಸುವ ಅಗತ್ಯವಿದೆಯೇ ಎನ್ನುವುದನ್ನು ನಿರ್ಧರಿಸಲೂ ಸಹ ನಮಗೆ ಇದು ನೆರವಾಗುತ್ತದೆ. ಕ್ಲಿಕ್‌-ಸ್ಟ್ರೀಮ್‌ ಡೇಟಾ ಸಾಮಾನ್ಯವಾಗಿ ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸುವುದಿಲ್ಲ. ಒಂದು ವೇಳೆ ಸಿಂಜೆಂಟಾ ಯಾವುದೇ ಕ್ಲಿಕ್‌-ಸ್ಟ್ರೀಮ್‌ ಡೇಟಾವನ್ನು ನಿಮ್ಮ ವೈಯಕ್ತಿಕ ಹೆಸರಿಗೆ ಜೋಡಣೆ ಮಾಡಿದರೆ ಅದನ್ನು ನಾವು ವೈಯಕ್ತಿಕ ಡೇಟಾ ಎಂದು ಪರಿಗಣಿಸುತ್ತೇವೆ. 

iii.                ಕುಕೀಗಳು:

ನಿಮ್ಮ ಕಂಪ್ಯೂಟರ್‌ನಲ್ಲಿ ನಮ್ಮ ಸ್ವಂತ ಮಾರ್ಕರ್‌ಗಳನ್ನು ಇನ್‌ಸ್ಟಾಲ್ ಮಾಡುವ ಮೂಲಕ ನಾವು ನಿಮ್ಮ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ಮಾರ್ಕರ್‌ ಅನ್ನು ಸಾಮಾನ್ಯವಾಗಿ “ಕುಕಿ” ಎಂದು ಕರೆಯಲಾಗುತ್ತದೆ ಮತ್ತು ಇದು ಕಂಪ್ಯೂಟರ್‌ ಮೂಲಕ ಉತ್ಪಾದಿಸಲಾಗಿದ್ದು, ವಿಶಿಷ್ಟ ಐಡೆಂಟಿಫೈಯರ್ ಮೂಲಕ ನಿಮ್ಮನ್ನು ಗುರುತಿಸಲು ಇದು ನಮಗೆ ಅನುಕೂಲ ಕಲ್ಪಿಸುತ್ತದೆ.  ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕುಕೀ ಎಂದರೆ ಸೈಟ್‌ಗೆ ಭೇಟಿ ನೀಡಿದಾಗ ಸೈಟ್‌ಗೆ ಭೇಟಿ ನೀಡಿದವರ ಹಾರ್ಡ್‌ ಡ್ರೈವ್‌ನಲ್ಲಿ ಸಾಮಾನ್ಯವಾಗಿ ವೆಬ್‌ಸೈಟ್‌ಗಳು ಬರೆಯುವ ಸಣ್ಣ ಡೇಟಾ ಫೈಲ್ ಆಗಿರುತ್ತದೆ.  ನಮ್ಮ ಸೈಟ್‌ಗೆ ಪ್ರತಿ ಬಾರಿ ಆತ ಅಥವಾ ಆಕೆ ಭೇಟಿ ನೀಡಿದಾಗ ಮರಳಿ ಬಂದ ಸಂದರ್ಶಕರನ್ನು ಗುರುತಿಸಬಹುದಾದ ಮಾಹಿತಿಯನ್ನು ಕುಕೀ ಫೈಲ್ ಒಳಗೊಂಡಿರುತ್ತದೆ. ಹೆಚ್ಚಿನ ಭದ್ರತೆಗಾಗಿ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿರುತ್ತದೆ. ಸಂದರ್ಶಕರ ಅನುಭವವನ್ನು ನಿರಂತರವಾಗಿ ಸುಧಾರಿಸುವ ಸಲುವಾಗಿ ಚಟುವಟಿಕೆಯನ್ನು ಮತ್ತು ಟ್ರಾಫಿಕ್‌ ನಮೂನೆಗಳನ್ನು ಅಳೆಯುವ ವಿಧಾನವಾಗಿ ಸಿಂಜೆಂಟಾದ ಸೈಟ್‌ಗಳು ಕುಕೀಗಳನ್ನು ಬಳಸಬಹುದು. ಉದಾಹರಣೆಗೆ, ಒಮ್ಮೆ ನೀವು ಒಂದು ಉತ್ಪನ್ನವನ್ನು ಖರೀದಿಸಿದ ಬಳಿಕ, ಒಂದು ವೇಳೆ ಅದನ್ನು ನೀವು ಪುನಃ ಖರೀದಿಸಬೇಕಾದರೆ, ಗಾತ್ರ, ಬಣ್ಣ ಅಥವಾ ಇತರ ವೈಶಿಷ್ಟ್ಯಗಳ ಹಿಂದಿನ ಆಯ್ಕೆಗಳನ್ನು ಉಳಿಸಿಕೊಳ್ಳಲಾಗುತ್ತದೆ ಮತ್ತು  ಆ ಮೂಲಕ ನೀವು ತ್ವರಿತವಾಗಿ ಮರು ಭರ್ತಿ ಮಾಡಬಹುದಾಗಿರುತ್ತದೆ, ಇದು ನಿಮ್ಮ ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ.

ಕುಕೀಗಳನ್ನು ನಿರಾಕರಿಸಲು ನಿಮ್ಮ ಕಂಪ್ಯೂಟರ್‌ ವಿಶೇಷವಾಗಿ ವಿನ್ಯಾಸಗೊಂಡಿರಬಹುದು: ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಬ್ರೌಸರ್ ಪರಿಶೀಲಿಸಿ. ಒಂದು ವೇಳೆ ನೀವು ಕುಕೀಗಳನ್ನು ಸ್ವೀಕರಿಸಲು ಬಯಸದಿದ್ದರೆ, ನಿಮ್ಮ ಕುಕೀಗಳನ್ನು ನಿರಾಕರಿಸಲು ಅಥವಾ ನಿಮ್ಮ ಕಂಪ್ಯೂಟರ್‌ನಲ್ಲಿ ಕುಕೀ ಸ್ಥಾಪನೆಯಾದಾಗ ನಿಮಗೆ ಎಚ್ಚರಿಕೆ ನೀಡಲು ನೀವು ನಿಮ್ಮ ಬ್ರೌಸರ್ ಅನ್ನು ಸೆಟ್ ಮಾಡಬಹುದು.  ಒಂದು ಸೈಟ್‌ನಿಂದ ನೀವು ನಿರ್ಗಮಿಸಿದ ತಕ್ಷಣವೇ ನಮ್ಮ ಕುಕೀಗಳನ್ನು ಡಿಲೀಟ್‌ ಕೂಡ ಮಾಡಬಹುದು. ನಮ್ಮ ಸೈಟ್‌ಗೆ ನೀವು ಭೇಟಿ ನೀಡಿದಾಗ ನಮ್ಮ ಕುಕೀಗಳನ್ನು ನೀವು ಸ್ವೀಕರಿಸುವ ಅಗತ್ಯವಿಲ್ಲದಿದ್ದರೂ ಸಹ, ಒಂದು ವೇಳೆ ನಿಮ್ಮ ಬ್ರೌಸರ್ ಕುಕೀಗಳನ್ನು ನಿರಾಕರಿಸಿದರೆ, ನಮ್ಮ ಸೈಟ್‌ಗಳ ಎಲ್ಲ ವೈಶಿಷ್ಟ್ಯಗಳು ಮತ್ತು ಕಾರ್ಯನಿರ್ವಹಣೆಯನ್ನು ನೀವು ಬಳಸಲು ಸಾಧ್ಯವಾಗುವುದಿಲ್ಲ.

ಸೈಟ್‌ಮೂಲಕ ಸಂಗ್ರಹಿಸಿದ ವೈಯಕ್ತಿಕ ಡೇಟಾದ ಬಹಿರಂಗಪಡಿಸುವುದು:

i.                    ನಮ್ಮ ಸಹಸಂಸ್ಥೆಗೆ ವೈಯಕ್ತಿಕ ಡೇಟಾ ಬಹಿರಂಗಪಡಿಸುವುದು:

ಈ ಸೈಟ್‌ನ ಮೂಲಕ ಸಂಗ್ರಹಿಸಿದ ವೈಯಕ್ತಿಕ ಡೇಟಾವನ್ನು ಸಿಂಜೆಂಟಾ ತನ್ನ ಅಂಗಸಂಸ್ಥೆಗಳು ಮತ್ತು ಸಹಸಂಸ್ಥೆಗಳಿಗೆ ಬಹಿರಂಗಪಡಿಸಬಹುದು, ಸಿಂಜೆಂಟಾ ವೈಯಕ್ತಿಕ ಡೇಟಾವನ್ನು ಬಳಸುವ ರೀತಿಯಲ್ಲೇ (ಅಂದರೆ ಈ ಗೌಪ್ಯತಾ ಹೇಳಿಕೆಯ ಅನುಸಾರವಾಗಿ) ಅವರೂ ವೈಯಕ್ತಿಕ ಡೇಟಾವನ್ನು ಬಳಸಬಹುದು . ತನ್ನ ಅಂಗಸಂಸ್ಥೆಗಳು ಮತ್ತು ಸಹಸಂಸ್ಥೆಗಳ ಜೊತೆ ಸಿಂಜೆಂಟಾ ನಿಮ್ಮ ವೈಯಕ್ತಿಕ ಡೇಟಾವನ್ನು ಹಂಚಿಕೊಳ್ಳಬಾರದು ಎಂದು ಒಂದು ವೇಳೆ ನೀವು ಬಯಸಿದರೆ, ದಯವಿಟ್ಟು ನಮ್ಮ ವೆಬ್‌ಮಾಸ್ಟರ್‌ ಮೂಲಕ ತಿಳಿಸಿ.

ii.                  ಸಂಬಂಧವಿಲ್ಲದ ಮೂರನೇ ಪಕ್ಷಗಳಿಗೆ ವೈಯಕ್ತಿಕ ಡೇಟಾ ಬಹಿರಂಗಪಡಿಸುವುದು:

ಈ ಸೈಟ್ ಮೂಲಕ ಸಂಗ್ರಹಿಸಲಾದ ವೈಯಕ್ತಿಕ ಡೇಟಾವನ್ನು ಸಿಂಜೆಂಟಾ, ಅದರ ಅಂಗಸಂಸ್ಥೆಗಳು ಮತ್ತು ಸಹಸಂಸ್ಥೆಗಳು,  ಸಿಂಜೆಂಟಾ ಮತ್ತು/ಅಥವಾ ಅದರ ಅಂಗಸಂಸ್ಥೆಗಳು ಮತ್ತು ಸಹಸಂಸ್ಥೆಗಳ ಪರವಾಗಿ ಕಾರ್ಯನಿರ್ವಹಿಸುವ ವಿಶ್ವಾದ್ಯಂತದ ಮೂರನೇ ಪಕ್ಷಗಳೊಂದಿಗೆ ಹಂಚಿಕೊಳ್ಳಬಹುದು, ಉದಾಹರಣೆಗೆ ಡೇಟಾ ಪ್ರೊಸೆಸಿಂಗ್‌ ಸೇವೆಗಳು ಸೇರಿದಂತೆ ನಮಗೆ ಬೆಂಬಲ ಸೇವೆಗಳನ್ನು ಒದಗಿಸುವ, ಅಥವಾ ನಮ್ಮ ಉತ್ಪನ್ನ ಮತ್ತು ಸೇವೆಗಳನ್ನು ಮಾರಾಟ ಮಾಡಲು ನಮಗೆ ನೆರವಾಗುವ ಕಂಪನಿಗಳು.  ಅವರ ಕಾರ್ಯಗಳನ್ನು ನಿರ್ವಹಿಸಲು ಈ ಸಂಸ್ಥೆಗಳಿಗೆ ನಿಮ್ಮ ಕುರಿತ ಮಾಹಿತಿ ಬೇಕಾಗಬಹುದು. ನಾವು ಹಂಚಿದ ವೈಯಕ್ತಿಕ ಡೇಟಾವನ್ನು, ಈ ಗೌಪ್ಯತಾ ಹೇಳಿಕೆಯಡಿ ನಾವು ನಿಮಗೆ ಸೂಚಿಸಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಗಳಿಗಾಗಿ ಬಳಸುವುದಕ್ಕೆ ಈ ಕಂಪನಿಗಳಿಗೆ ಅಧಿಕಾರ ಇರುವುದಿಲ್ಲ

iii.                ವಿದೇಶಕ್ಕೆ ವೈಯಕ್ತಿಕ ಡೇಟಾದ ವರ್ಗಾವಣೆ:

ಸಿಂಜೆಂಟಾ ಮತ್ತು ಅದರ ಅಂಗಸಂಸ್ಥೆಗಳು ಮತ್ತು ಸಹಸಂಸ್ಥೆಗಳು ಜಾಗತಿಕ ವ್ಯವಹಾರದಲ್ಲಿ ತೊಡಗಿವೆ ಮತ್ತು ವಿವಿಧ ದೇಶಗಳಲ್ಲಿ ಘಟಕಗಳು ಮತ್ತು ಡೇಟಾಬೇಸ್‌ಗಳನ್ನು ಹೊಂದಿವೆ. ಸಿಂಜೆಂಟಾ ಮತ್ತು ಅದರ ಅಂಗಸಂಸ್ಥೆಗಳು ಹಾಗೂ ಸಹಸಂಸ್ಥೆಗಳು, ಈ ಗೌಪ್ಯತಾ ಹೇಳಿಕೆಯಲ್ಲಿ ವಿವರಿಸಿರುವ ಉದ್ದೇಶಗಳಿಗಾಗಿ, ಆಗಾಗ ನಿಮ್ಮ ವೈಯಕ್ತಿಕ ಡೇಟಾವನ್ನು ಸಿಂಜೆಂಟಾ, ಅದರ ಸಹಸಂಸ್ಥೆ, ಅಥವಾ ಅಂಗಸಂಸ್ಥೆ, ಅಥವಾ ಇನ್ನೊಂದು ದೇಶದಲ್ಲಿರುವ ಮೂರನೇ ಪಕ್ಷಕ್ಕೆ ಸೇರಿದ ಡೇಟಾಬೇಸ್‌ಗೆ ವರ್ಗಾವಣೆ ಮಾಡಬಹುದು. ಸಿಂಜೆಂಟಾ ಹಾಗೆ ಮಾಡಿದಾಗ, ನಿಮ್ಮ ವೈಯಕ್ತಿಕ ಡೇಟಾದ ಗೌಪ್ಯತೆ ಮತ್ತು ಭದ್ರತೆಯನ್ನು ರಕ್ಷಿಸಲು ಅನ್ವಯವಾಗುವ ಕಾನೂನುಗಳಡಿ ಸೂಕ್ತ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುತ್ತದೆ.

iv.                ಇತರ ಪ್ರಕರಣಗಳಲ್ಲಿ ವೈಯಕ್ತಿಕ ಡೇಟಾದ ವರ್ಗಾವಣೆ:

ಮೇಲಿನವುಗಳ ಜೊತೆಗೆ ಹೆಚ್ಚುವರಿಯಾಗಿ. ತಮ್ಮ ಡೇಟಾಬೇಸ್‌ನಲ್ಲಿರುವ ವೈಯಕ್ತಿಕ ಡೇಟಾವನ್ನು ಸಿಂಜೆಂಟಾ ಅಥವಾ ಅದರ ಅಂಗಸಂಸ್ಥೆಗಳು ಅಥವಾ ಸಹಸಂಸ್ಥೆಗಳು ಸಂಬಂಧವಿಲ್ಲದ ಮೂರನೇ ಪಕ್ಷದೊಂದಿಗೆ ಹಂಚಿಕೊಳ್ಳಬಹುದಾದ ಕೆಲವು ಇತರ ಸೀಮಿತ ಸನ್ನಿವೇಶಗಳಿರಬಹುದು, ಉದಾಹರಣೆಗೆ ಕಾನೂನು ಅಗತ್ಯಗಳ ಅನುಸರಣೆಗಾಗಿ ಮತ್ತು/ಅಥವಾ ನ್ಯಾಯ ನಿರ್ಣಯಕ್ಕಾಗಿ, ಮತ್ತು/ಅಥವಾ ನೀವು ಅಥವಾ ನಿಮ್ಮ ಕಂಪನಿಯ ಪ್ರಮುಖ ಹಿತಾಸಕ್ತಿಗಳ ರಕ್ಷಣೆಗಾಗಿ, ಮತ್ತು/ಅಥವಾ ಕಾರ್ಪೊರೆಟ್ ಮಾರಾಟ, ವಿಲೀನ, ಮರುಸಂಘಟನೆ, ಮುಚ್ಚುವಿಕೆ ಅಥವಾ ಅದಕ್ಕೆ ಸಮನಾದ ಸನ್ನಿವೇಶ.

ಅಗತ್ಯವಿರುವಲ್ಲಿ, ಮೂರನೇ ಪಕ್ಷಕ್ಕೆ ವೈಯಕ್ತಿಕ ಡೇಟಾವನ್ನು ಬಹಿರಂಗಪಡಿಸುವ ಮೊದಲು, ಅನಧಿಕೃತ ಬಳಕೆ ಅಥವಾ ಬಹಿರಂಗಪಡಿಸುವಿಕೆಯಿಂದ ಡೇಟಾವನ್ನು ರಕ್ಷಿಸಲು ಸೂಕ್ತ ಮುನ್ನೆಚ್ಚರಿಕೆ ವಹಿಸುವ ಒಪ್ಪಂದವನ್ನು ಮೂರನೇ ಪಕ್ಷಗಳು ಸಿಂಜೆಂಟಾ ಜೊತೆ ಮಾಡಿಕೊಳ್ಳಬೇಕಾಗುತ್ತದೆ.  ಈ ಕಟ್ಟುನಿಟ್ಟಾಗಿ ನಿಯಂತ್ರಿಸಿರುವ ಷರತ್ತುಗಳಡಿ, ಮೂರನೇ ಪಕ್ಷಗಳ ಜೊತೆ ಸಿಂಜೆಂಟಾ ನಿಮ್ಮ ವೈಯಕ್ತಿಕ ಡೇಟಾವನ್ನು ಹಂಚಿಕೊಳ್ಳಬಾರದು ಎಂದು ಒಂದು ವೇಳೆ ನೀವು ಬಯಸಿದರೆ, ದಯವಿಟ್ಟು ನಮ್ಮ ವೆಬ್‌ಮಾಸ್ಟರ್‌ ಮೂಲಕ ತಿಳಿಸಿ."

ಡೇಟಾ ಸಮಗ್ರತೆ ಮತ್ತು ಭದ್ರತೆ:

ನಮ್ಮ ಡೇಟಾಬೇಸ್‌ನಲ್ಲಿ ವೈಯಕ್ತಿಕ ಡೇಟಾದ ವಿಶ್ವಾಸಾರ್ಹತೆ, ನೈಜತೆ, ಪೂರ್ಣತೆ ಮತ್ತು ಪ್ರಸ್ತುತತೆಯನ್ನು ಕಾಯ್ದುಕೊಳ್ಳಲು ಮತ್ತು ನಮ್ಮ ಡೇಟಾಬೇಸ್‌ಗಳ ಭದ್ರತೆಯನ್ನು ರಕ್ಷಿಸಲು ಸಿಂಜೆಂಟಾ ವಾಣಿಜ್ಯಿಕವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಯಾವ ಕಾರಣಕ್ಕಾಗಿ ಸಂಗ್ರಹಿಸಲಾಗಿದೆಯೋ ಆ ಕಾರಣಕ್ಕೆ ತರ್ಕಬದ್ಧವಾಗಿ ಅಗತ್ಯವಿರುವವರೆಗೆ ಅಥವಾ ಅನ್ವಯವಾಗುವ ಒಂದು ಕಾನೂನು ವರದಿಗಾರಿಕೆ ಅಥವಾ ದಾಖಲೆ ಉಳಿಸಿಕೊಳ್ಳುವಿಕೆ ಅಗತ್ಯಗಳಿಗಾಗಿ ಮಾತ್ರ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಉಳಿಸಿಕೊಳ್ಳುತ್ತೇವೆ. ಉದ್ಯಮ ಮಾನದಂಡದ ಫೈರ್‌ವಾಲ್‌ಗಳು ಮತ್ತು ಪಾಸ್‌ವರ್ಡ್‌ ರಕ್ಷಣೆಯಂಥ ಉದ್ಯಮ ಮಾನದಂಡದ ಸುರಕ್ಷತಾ ತಂತ್ರಜ್ಞಾನಗಳಿಂದ ನಮ್ಮ ಸರ್ವರ್‌ಗಳು ಮತ್ತು ನಮ್ಮ ಡೇಟಾಬೇಸ್‌ಗಳು ರಕ್ಷಿಸಲ್ಪಟ್ಟಿವೆ. ವೈಯಕ್ತಿಕ ಡೇಟಾಗೆ ಪ್ರವೇಶ ಹೊಂದಿರುವ ಉದ್ಯೋಗಿಗಳಿಗೆ ಅಂಥ ಡೇಟಾವನ್ನು ಸೂಕ್ತವಾಗಿ ಮತ್ತು ನಮ್ಮ ಭದ್ರತಾ ಪ್ರೊಟೊಕಾಲ್‌ಗೆ ಅನುಸಾರವಾಗಿ ನಿರ್ವಹಿಸಲು ತರಬೇತಿಯನ್ನು ಒದಗಿಸಲಾಗಿದೆ. ಯಾವುದೇ ನಷ್ಟ, ದುರ್ಬಳಕೆ, ಅನಧಿಕೃತ ಬಹಿರಂಗಪಡಿಸುವಿಕೆ, ಬದಲಾವಣೆ ಅಥವಾ ಡೇಟಾ ನಾಶದ ವಿರುದ್ಧ ನಾವು ಯಾವುದೇ ಖಾತ್ರಿಯನ್ನು ನೀಡಲು ಸಾಧ್ಯವಿಲ್ಲವಾದರೂ ಸಹ, ಅಂಥ ದುರದೃಷ್ಟಕರ ಘಟನೆಗಳನ್ನು ತಡೆಗಟ್ಟಲು ನಾವು ಪ್ರಯತ್ನಿಸುತ್ತೇವೆ.

ನಿಮ್ಮ ಸ್ವಂತ ಗೌಪ್ಯತೆಯನ್ನು ರಕ್ಷಿಸಿಕೊಳ್ಳುವುದು:

ನೀವು ಆನ್‌ಲೈನ್‌ನಲ್ಲಿ ಸ್ವಇಚ್ಛೆಯಿಂದ ಬಹಿರಂಗಪಡಿಸುವ ಯಾವುದೇ ವಿಷಯದ - ಉದಾಹರಣೆಗೆ ಮೆಸೇಜ್‌ ಬೋರ್ಡ್‌ಗಳಲ್ಲಿ, ಇ-ಮೇಲ್ ಮೂಲಕ, ಅಥವಾ ಚಾಟ್‌ ಪ್ರದೇಶಗಳಲ್ಲಿ- ಆ ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು ಮತ್ತೊಬ್ಬರು ಬಳಸಬಹುದು ಎನ್ನುವುದನ್ನು ದಯವಿಟ್ಟು ಗಮನದಲ್ಲಿಡಿ. ಕೊನೆಯದಾಗಿ, ನಿಮ್ಮ ಪಾಸ್‌ವರ್ಡ್ ಮತ್ತು/ಅಥವಾ ಖಾತೆಗೆ ಸಂಬಂಧಿಸಿದ ಯಾವುದೇ ಮಾಹಿತಿಯ ರಹಸ್ಯವನ್ನು ಕಾಪಾಡುವುದಕ್ಕೆ ನೀವೊಬ್ಬರೇ ಹೊಣೆಗಾರರಾಗಿರುತ್ತೀರಿ.

ಡೇಟಾ ಪ್ರವೇಶ ಮತ್ತು ತಿದ್ದುಪಡಿಗಳು:

ನಮ್ಮ ಡೇಟಾ ಗೌಪ್ಯತಾ ಅಧಿಕಾರಿಯನ್ನು ಸಂಪರ್ಕಿಸುವ ಮೂಲಕ ಈ ಸೈಟ್ ಮೂಲಕ ಸಂಗ್ರಹಿಸಲಾದ ವೈಯಕ್ತಿಕ ಡೇಟಾವನ್ನು ಪ್ರವೇಶಿಸಲು ಅಥವಾ ಸರಿಪಡಿಸಲು ನೀವು ಬಯಸಬಹುದು. ನಿಮ್ಮ ವೈಯಕ್ತಿಕ ಡೇಟಾವನ್ನು ಗುರುತಿಸುವುದಕ್ಕೆ ನಮಗೆ ಅನುಮತಿಸಲು ದಯವಿಟ್ಟು ಸಾಕಷ್ಟು ಮಾಹಿತಿಯನ್ನು ಒದಗಿಸಿ. ನಾವು ನಿಮ್ಮ ಮನವಿಗಳಿಗೆ ತಕ್ಷಣ ಮತ್ತು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ. ಅದಾಗ್ಯೂ, ವೈಯಕ್ತಿಕ ಡೇಟಾವನ್ನು ಸರಿಪಡಿಸಲು ಅಥವಾ ಅಳಿಸಲು ಮಾಡುವ ಮನವಿಗಳು, ಸಿಂಜೆಂಟಾ ಮೇಲೆ ವಿಧಿಸಲಾಗಿರುವ ಯಾವುದೇ ಅನ್ವಯವಾಗುವ ಕಾನೂನು ವರದಿಗಾರಿಕೆ ಅಥವಾ ದಾಖಲೆ ಉಳಿಸಿಕೊಳ್ಳುವಿಕೆ ಬಾಧ್ಯತೆಗಳಿಗೆ ಒಳಪಟ್ಟಿರುತ್ತದೆ.

ಮಕ್ಕಳು:

ಹದಿನೆಂಟು (18) ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳ ವೈಯಕ್ತಿಕ ಡೇಟಾವನ್ನು ಸಿಂಜೆಂಟಾ ಗೊತ್ತಿದ್ದೂ ಸಂಗ್ರಹಿಸುವುದಿಲ್ಲ. ಒಂದು ವೇಳೆ ನೀವು ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ದಯವಿಟ್ಟು ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಬೇಡಿ. ಒಂದು ವೇಳೆ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಈ ಸೈಟ್‌ನ ಮೂಲಕ ಸಿಂಜೆಂಟಾಗೆ ವೈಯಕ್ತಿಕ ಮಾಹಿತಿ ಒದಗಿಸಿದೆ ಎಂದು ಭಾವಿಸಲು ನಿಮಗೆ ಯಾವುದೇ ಕಾರಣಗಳಿದ್ದಲ್ಲಿ, ದಯವಿಟ್ಟು ನಮ್ಮ ಡೇಟಾ ಗೌಪ್ಯತಾ ಅಧಿಕಾರಿ ಮೂಲಕ ನಮ್ಮನ್ನು ಸಂಪರ್ಕಿಸಿ, ಮತ್ತು ನಮ್ಮ ಡೇಟಾಬೇಸ್‌ನಿಂದ ಆ ವೈಯಕ್ತಿಕ ಡೇಟಾ ಅಳಿಸಲು ನಾವು ಪ್ರಯತ್ನಿಸುತ್ತೇವೆ.

ಇತರ ವೆಬ್‌ಸೈಟ್‌ಗಳಿಗೆ ಹೈಪರ್‌ಲಿಂಕ್‌ಗಳು

i.                    ಅಂಗಸಂಸ್ಥೆಗಳು ಮತ್ತು ಸಹಸಂಸ್ಥೆಗಳ ವೆಬ್‌ಸೈಟ್‌ಗಳಿಗೆ ಹೈಪರ್‌ಲಿಂಕ್‌ಗಳು:

ಈ ಗೌಪ್ಯತಾ ಹೇಳಿಕೆ ಕೇವಲ www.syngenta.co.in ರಿಗೆ ಅನ್ವಯವಾಗುತ್ತದೆ. ವಿವಿಧ ಉದ್ದೇಶಗಳಿಗಾಗಿ ಮತ್ತು ವಿವಿಧ ದೇಶಗಳಲ್ಲಿ ಸಿಂಜೆಂಟಾ ಮತ್ತು ಅದರ ಅಂಗಸಂಸ್ಥೆಗಳು ಮತ್ತು ಸಹಸಂಸ್ಥೆಗಳು ಅನೇಕ ಬಗೆಯ ವೆಬ್‌ಸೈಟ್‌ಗಳನ್ನು ನಿರ್ವಹಿಸುತ್ತವೆ, ಈ ದೇಶಗಳಲ್ಲಿ ವಿವಿಧ ಕಾನೂನುಗಳು ಅನ್ವಯವಾಗಬಹುದು. ಒಂದು ವೇಳೆ ನೀವು ಸಿಂಜೆಂಟಾ ಅಥವಾ ಅದರ ಅಂಗಸಂಸ್ಥೆ ಅಥವಾ ಸಹಸಂಸ್ಥೆ ಕಾರ್ಯಾಚರಿಸುವ ಇನ್ನೊಂದು ವೆಬ್‌ಸೈಟ್‌ಗೆ ಭೇಟಿ ನೀಡಿದರೆ, ಆ ಸೈಟ್‌ನ ಮೂಲಕ ಯಾವ ವೈಯಕ್ತಿಕ ಡೇಟಾವನ್ನು ಸಂಗ್ರಹಿಸಲಾಗುತ್ತದೆ ಮತ್ತು ಅದನ್ನು ಹೇಗೆ ಪ್ರಕ್ರಿಯೆಗೊಳಿಸಲಾಗುತ್ತದೆ ಎನ್ನುವುದನ್ನು ಪರಿಶೀಲಿಸಲು ದಯವಿಟ್ಟು ಒಂದಿಷ್ಟು ಸಮಯ ವ್ಯಯಿಸಿ.

ii.                  ಮೂರನೇ ಪಕ್ಷದ ವೆಬ್‌ಸೈಟ್‌ಗಳಿಗೆ ಹೈಪರ್‌ಲಿಂಕ್‌ಗಳು:

ಸಿಂಜೆಂಟಾ ಅಥವಾ ಅದರ ಯಾವುದೇ ಅಂಗಸಂಸ್ಥೆಗಳು ಮತ್ತು ಸಹಸಂಸ್ಥೆಗಳು ಕಾರ್ಯಾಚರಣೆ ಮಾಡದೇ ಇರುವ ವೆಬ್‌ಸೈಟ್‌ಗಳ ಹೈಪರ್‌ಲಿಂಕ್‌ಗಳನ್ನು ಈ ಸೈಟ್‌ ಒಳಗೊಂಡಿರಬಹುದು. ಈ ಹೈಪರ್‌ಲಿಂಕ್‌ಗಳನ್ನು ನಿಮ್ಮ ಉಲ್ಲೇಖ ಮತ್ತು ಅನುಕೂಲಕ್ಕಾಗಿ ಮಾತ್ರ ನೀಡಲಾಗಿದೆ ಹಾಗೂ ಈ ಮೂರನೇ ಪಕ್ಷದ ವೆಬ್‌ಸೈಟ್‌ಗಳ ಚಟುವಟಿಕೆಗಳಿಗೆ ಯಾವುದೇ ಪ್ರೋತ್ಸಾಹ ನೀಡುವುದಿಲ್ಲ ಅಥವಾ ಈ ಆಪರೇಟರ್‌ಗಳ ಜೊತೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ. ಸಿಂಜೆಂಟಾ ಈ ವೆಬ್‌ಸೈಟ್‌ಗಳನ್ನು ನಿಯಂತ್ರಿಸುವುದಿಲ್ಲ ಹಾಗೂ ಅವರ ಡೇಟಾ ವಿಧಾನಗಳಿಗೆ ಜವಾಬ್ದಾರನಾಗಿರುವುದಿಲ್ಲ. ನೀವು ವೆಬ್‌ಸೈಟ್ ಬಳಸುವ ಮೊದಲು ಅಥವಾ ನಿಮ್ಮ ಬಗ್ಗೆ ಯಾವುದೇ ವೈಯಕ್ತಿಕ ಡೇಟಾ ನೀಡುವುದಕ್ಕೆ ಮುಂಚೆ ನೀವು ಭೇಟಿ ನೀಡುವ ಯಾವುದೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಗೌಪ್ಯತಾ ಹೇಳಿಕೆ/ ನೀತಿಯನ್ನು ಪರಿಶೀಲಿಸುವಂತೆ ನಾವು ಒತ್ತಾಯಿಸುತ್ತೇವೆ

ನಮ್ಮ ಗೌಪ್ಯತಾ ಹೇಳಿಕೆಯ ಬಗ್ಗೆ ಪ್ರಶ್ನೆಗಳು

ಈ ಗೌಪ್ಯತಾ ಹೇಳಿಕೆಯ ಬಗ್ಗೆ ನಿಮ್ಮಲ್ಲಿ ಯಾವುದೇ ಪ್ರಶ್ನೆಗಳಿದ್ದಲ್ಲಿ ಅಥವಾ ನಿಮ್ಮ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿರುವ ವಿಧಾನದ www.syngenta.co.in ಬಗ್ಗೆ ಯಾವುದೇ ಆತಂಕಗಳಿದ್ದಲ್ಲಿ, ದಯವಿಟ್ಟು ನಮ್ಮ ಡೇಟಾ ಗೌಪ್ಯತಾ ಅಧಿಕಾರಿಯ ಮೂಲಕ ತಿಳಿಸಿ. :